ತುಮಕೂರು: ದೇಶದಲ್ಲಿರುವ ‘ಭಾಷೆಗಳೆಲ್ಲ ಸಮಾನ’ ಎಂಬ ರಾಷ್ಟ್ರೀಯ ನೀತಿ ರೂಪುಗೊಳ್ಳಬೇಕು. ಇಂತಹ ‘ಭಾಷಾ ಸಮಾನತೆ’ಯ ಹೋರಾಟ ಕನ್ನಡಿಗರಿಂದಲೇ ಆರಂಭವಾಗಬೇಕು ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಕರೆ ನೀಡಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಭಾಷಾ ಸಮಾನತೆಯ ನೀತಿ ರೂಪುಗೊಂಡರೆ ರಾಜಕೀಯ ಒತ್ತಡಗಳಿಂದ ಭಾಷೆಯ ಸ್ಥಾನಮಾನ ನಿರ್ಧರಿಸುವ ಚದುರಂಗದಾಟಕ್ಕೆ ಅವಕಾಶ ಇರುವುದಿಲ್ಲ. ಎಲ್ಲ ಭಾಷೆಗಳನ್ನು ಸಮಾನವೆಂದು ಪರಿಗಣಿಸಿ, ಸಮಾನ ಸ್ಥಾನಮಾನ ನೀಡಿ, ಸಂಪನ್ಮೂಲ ಒದಗಿಸುವ ರಾಷ್ಟ್ರೀಯ ನೀತಿಗಾಗಿ ಒತ್ತಾಯಿಸಿ ಕನ್ನಡಿಗರು ಹೋರಾಟಕ್ಕೆ ನಾಂದಿ ಹಾಡಬೇಕು ಎಂದು ಹೇಳಿದರು.

‘ತಮಿಳುನಾಡಿನ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ತಮಿಳುಗೆ ‘ಶಾಸ್ತ್ರೀಯ ಭಾಷೆ’ ಸ್ಥಾನಮಾನ ನೀಡಿತು. ದ್ರಾವಿಡ ಸಂಸ್ಕೃತಿಯ ತಮಿಳುನಾಡಿನವರು ತಮ್ಮ ಒಂದೇ ಭಾಷೆಗೆ ಶಾಸ್ತ್ರೀಯ ಸ್ಥಾನ ಸಿಕ್ಕಿದ್ದರಿಂದ ಒಂದು ರೀತಿಯಲ್ಲಿ ಪೆಚ್ಚಾದರು. ಪಕ್ಕದ ಕನ್ನಡ ಭಾಷೆಗೆ ಈ ಸ್ಥಾನ ನೀಡುವಂತೆ ಒತ್ತಡ ತರುವ ಬದಲು ಆರ್ಯರ ಭಾಷೆಯಾದ ಸಂಸ್ಕೃತಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ಬೇಡಿಕೆ ಸಲ್ಲಿಸಿದರು. ನಂತರ ಸಂಸ್ಕೃತಕ್ಕೆ ಅಂತಹ ಅವಕಾಶ ಸಿಕ್ಕಿತು. ನಾನು ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾದ ಸಮಯದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಡಿಸಲು ಸಾಕಷ್ಟು ಪ್ರಯತ್ನಿಸಿದೆ’ ಎಂದು ತಮ್ಮ ಪ್ರಯತ್ನದ ಫಲವನ್ನು ಹಂಚಿಕೊಂಡರು.

ಪ್ರಸ್ತುತ ದೇಶದ 11 ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತಿದೆ. ಈ ಪಟ್ಟಕ್ಕೆ ಆರಂಭದಲ್ಲಿ ಇದ್ದ ನಿಯಮಗಳನ್ನು ಸಡಿಲಿಸಿ ಅವಕಾಶ ನೀಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ಎಲ್ಲ ಭಾಷೆಗಳಿಗೂ ಈ ಪಟ್ಟ ದೊರೆಯಲಿದೆ. ರಾಜಕೀಯ ಒತ್ತಡದಿಂದ ಒಪ್ಪಿಗೆ ನೀಡಲಾಗುತ್ತಿದೆ. ಅದರ ಬದಲು ‘ಭಾಷಾ ಸಮಾನತೆ’ ಮೂಡಿದರೆ ಎಲ್ಲಾ ಭಾಷೆಗಳಿಗೂ ಸಮಾನ ಅವಕಾಶಗಳು ಸಿಗಲಿವೆ ಎಂದರು.

ಹಿಂದಿ ಹೇರಿಕೆಗೆ ವಿರೋಧ: ಕಾಲೇಜು ದಿನಗಳಲ್ಲಿ ಹಿಂದಿ ಭಾಷೆ ಹೇರಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ, ಬಸ್ಗೆ ಕಲ್ಲು ತೂರಿದ್ದನ್ನು ನೆನಪು ಮಾಡಿಕೊಂಡರು. ಹಿಂದಿ ಎಂಬ ಘಟಪರ್ವ ಕನ್ನಡ ನುಂಗಲು ಬಿಡಬಾರದು ಎಂದು ಎಚ್ಚರಿಸಿದರು.

‘ದೇಶದಲ್ಲಿ ಹಿಂದಿ ಭಾಷೆಯನ್ನು ಹೆಚ್ಚು ಜನರು ಮಾತನಾಡುತ್ತಾರೆ. ಇದು ರಾಷ್ಟ್ರಭಾಷೆ’ ಎಂಬ ತಪ್ಪು ಕಲ್ಪನೆಗಳಿವೆ. ವಾಸ್ತವವಾಗಿ 35ಕ್ಕೂ ಹೆಚ್ಚು ಉಪಭಾಷೆಗಳನ್ನಾಡುವ ಜನರ ಸಮೂಹ ಈ ಭಾಷೆ ಬಳಸುತ್ತಿದೆ. ಈ ಸತ್ಯವನ್ನು ರಾಜಕಾರಣ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹಾಗಾಗಿ ಹಿಂದಿ ಎಂಬ ಘಟಸರ್ಪ ಆಗಾಗ ತಲೆಯೆತ್ತುತ್ತಲೇ ಇರುತ್ತದೆ. ಅದರೆ ತಲೆ ಮೇಲೆ ಮೊಟುಕಿದಾಗ ತೆಪ್ಪಗಾಗುತ್ತದೆ. ನಾವು ಮೈಮರೆತಾಗ ಮತ್ತೆ ತಲೆಯೆತ್ತುತ್ತದೆ ಎಂದು ಹೇಳುವ ಮೂಲಕ ಹಿಂದಿ ಹೇರಿಕೆಯನ್ನು ವಿರೋಧಿಸಿದರು.

ಲೇಖಕರು, ಕಲಾವಿದರು, ಪತ್ರಕರ್ತರು ಈಗ ಆತಂಕದ ಸ್ಥಿತಿಯಲ್ಲಿದ್ದು, ಅಭಿವ್ಯಕ್ತಿಗೆ ಧಕ್ಕೆ ಬಂದಿದೆ. ಯುದ್ಧ, ಭಯೋತ್ಪಾದನೆ, ಹಿಂಸೆ ತಲೆಯೆತ್ತುತ್ತಲೇ ಇದೆ. ಈಶಾನ್ಯ ಭಾಗದ ಆತಂಕಕಾರಿ ಬೆಳವಣಿಗೆ, ಹಿಂಸೆಯನ್ನೂ ರಾಜಕಾರಣ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಎನ್ಕೌಂಟರ್ಗಳು ನಮ್ಮ ಮನೆ ಬಾಗಿಲಿಗೆ ಕಾಲಿಟ್ಟಿರುವುದು ಆತಂಕ ತರಿಸಿದೆ. ಇಂದಿನ ಹಿಂಸೆಯ ದಿನಗಳಲ್ಲಿ ಬುದ್ಧ, ಬಸವ, ಗಾಂಧೀಜಿಯ ಅಹಿಂಸಾ ವಾದಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಸಾಂತ್ವನದ ಮಾತುಗಳನ್ನಾಡಿದರು.

ತುಮಕೂರು, ಜಟ್ಟಿಅಗ್ರಹಾರದಲ್ಲಿ ಕಳೆದ ಬಾಲ್ಯ, ಅಲ್ಲಿನ ಪರಿಸರ, ಓದು, ಊರೂರು ಸುತ್ತಾಟ, ಮೊದಲ ಪುಸ್ತಕದ ಓದು (ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ), ಜಿಲ್ಲೆಯ ಸಾಹಿತಿಗಳ ಒಡನಾಟ, ಮೊದಲ ಬರಹಕ್ಕೆ ಬಂದ ಬಹುಮಾನ, ಹೋರಾಟ– ಚಳವಳಿಯಲ್ಲಿ ತೊಡಗಿಸಿಕೊಂಡ ನೆನಪುಗಳನ್ನು ಮೆಲುಕು ಹಾಕಿದರು.

ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಹನುಮಂತನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಿ.ಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಡಾ.ಅಸ್ಗರ್ ಬೇಗ್, ಮುರುಳೀಕೃಷ್ಣಪ್ಪ, ಡಿ.ಎನ್.ಯೋಗೇಶ್ವರಪ್ಪ, ಕೆ.ಎಸ್.ಉಮಾಮಹೇಶ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.