ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ | ಎರಡು ಕುಟುಂಬದ ನಡುವೆ ಹೊಡೆದಾಟ

Published : 17 ಆಗಸ್ಟ್ 2024, 5:57 IST
Last Updated : 17 ಆಗಸ್ಟ್ 2024, 5:57 IST
ಫಾಲೋ ಮಾಡಿ
Comments

ಗುಬ್ಬಿ: ತೋಟದಲ್ಲಿ ಬೆಳೆಸಿದ್ದ ಅಡಿಕೆ ಮತ್ತು ಬಾಳೆ ಗಿಡಗಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಆಗಸ್ಟ್ 12ರಂದು ಗ್ರಾಮದ ಮೃತ್ಯುಂಜಯಪ್ಪ ಅವರು ತೋಟಕ್ಕೆ ಮಣ್ಣು ಹೊಡೆಯುವಾಗ ಗುರುಬಸಪ್ಪ ಅವರಿಗೆ ಸೇರಿದ ಅಡಿಕೆ ಮತ್ತು ಬಾಳೆ ಗಿಡಗಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹಾಳು ಮಾಡಿದ್ದರು ಎಂದು ದೂರಿದ್ದಾರೆ.

ಈ ಸಂಬಂಧ ತೋಟದ ಮಾಲೀಕ ಗುರುಬಸಪ್ಪ ಅವರು ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಾದ ಮೃತ್ಯುಂಜಯಪ್ಪ, ಚಂದ್ರಶೇಖರಯ್ಯ, ಉಷಾರಾಣಿ ಹಾಗೂ ಮನೋಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT