ತುಮಕೂರು: ಸಾಹಿತ್ಯ ಸಮ್ಮೇಳನಗಳಿಗೆ ಒಂದು ಸ್ವರೂಪ, ಚೌಕಟ್ಟು ರೂಪುಗೊಳ್ಳುವ ಅಗತ್ಯವಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಇಲ್ಲಿ ಶುಕ್ರವಾರ ಪ್ರತಿಪಾದಿಸಿದರು.

ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಸಾಹಿತ್ಯ ಸಮ್ಮೇಳನವನ್ನು ಸರಳ, ಸಾರ್ಥಕ, ಅರ್ಥಪೂರ್ಣ ಆಚರಣೆಯನ್ನಾಗಿಸಬೇಕು. ಈ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ’ ಎಂದರು.

ಸಾಹಿತ್ಯ ಸಮ್ಮೇಳನಗಳು ಹತ್ತಿರ ಬಂದ ಸಮಯದಲ್ಲಿ ಸರಳತೆ ಬಗ್ಗೆ ಮಾತನಾಡುತ್ತೇವೆ, ನಂತರ ಸುಮ್ಮನಾಗುತ್ತೇವೆ. ಆದರೆ ₹25 ಕೋಟಿ ಖರ್ಚು ಮಾಡಿ ಸಮ್ಮೇಳನ ನಡೆಸುತ್ತೇವೆ. ಸಾಹಿತ್ಯದ ಸತ್ವವನ್ನು ಕೋಟಿಗಳಲ್ಲಿ ಅಳೆಯಬಾರದು. ನಿಜವಾಗಿ ಹೃದಯಸ್ಥವಾಗಿರುವಂತೆ ನೋಡಿಕೊಳ್ಳಬೇಕು. ಆಡಂಬರಕ್ಕಿಂತ ಸರಳ, ಅರ್ಥಪೂರ್ಣ ಆಚರಣೆ ಮುಖ್ಯವಾಗಬೇಕು ಎಂದು ಸಲಹೆ ಮಾಡಿದರು.

ಸಾಹಿತ್ಯ ಸಮ್ಮೇಳನಗಳಲ್ಲಿ ನಮ್ಮ ವಿಚಾರಗಳು ಚರ್ಚೆಯಾಗಬೇಕು ಎಂದು ಹಲವರು ಒತ್ತಾಯಿಸುತ್ತಾರೆ. ಸಾಹಿತ್ಯೇತರ ಗೋಷ್ಠಿಗಳೇ ಹೆಚ್ಚಿರುತ್ತವೆ. ರೈತರು, ಕಾರ್ಮಿಕರು, ದಲಿತರು ಸೇರಿದಂತೆ ಇತರೆ ವರ್ಗದವರ ವಿಚಾರ ಚರ್ಚೆಗೆ ಬರುತ್ತದೆ. ಇತರೆ ಸಮ್ಮೇಳನಗಳಲ್ಲಿ ಸಾಹಿತ್ಯ ವಿಚಾರ ಚರ್ಚೆಯಾಗಬೇಕು ಎಂದು ನಾವು ಕೇಳುವುದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ವಿಚಾರ ಚರ್ಚೆಯಾಗಬೇಕಾದರೆ ಸಾಹಿತ್ಯ ಕೇಂದ್ರಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ವಿವೇಕ: ಸಮಕಾಲೀನ ಸಂದರ್ಭದಲ್ಲಿ ‘ಕನ್ನಡದ ವಿವೇಕ’ಕ್ಕೆ ಮಹತ್ವ ನೀಡಬೇಕಿದೆ. ವಿವೇಕದ ಜಾಗದಲ್ಲಿ ಅವಿವೇಕ, ಅಸತ್ಯ, ಜಾತೀಯತೆ, ಮತೀಯತೆ, ಅಸಹನೆ ತುಂಬಿಕೊಂಡಿದೆ. ಪಂಪನಿಂದ ಹಿಡಿದು ಈವರೆಗೆ ಕನ್ನಡ ಸಾಹಿತ್ಯ ವಿವೇಕವನ್ನು ಕೊಟ್ಟಿದೆ. ಇಂತಹ ಮಾನವೀಯತೆ ಇರುವ ಕನ್ನಡವನ್ನು ಎಲ್ಲೆಡೆ ವಿಸ್ತರಿಸಬೇಕಿದೆ. ಖಲೀಲ್ ಗಿಬ್ರಾನ್ ಹೇಳುವಂತೆ ‘ನನ್ನ ತಾಯಿ ಒಂದೂ ಕವಿತೆ ಬರೆಯಲಿಲ್ಲ. ನೂರಾರು ಕವಿತೆಗಳನ್ನು ಬದುಕಿದರು’ ಎಂದು ಹೇಳಿದರು. ಅಂತಹ ವಿವೇಕವನ್ನು ಪ್ರಸರಿಸಬೇಕಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.