ಅಪಾರ ಹಾನಿಯಾಗಿದ್ದರೂ ಗೃಹ ಸಚಿವ ಜಿ.ಪರಮೇಶ್ವರ ‘ಇದೊಂದು ಸಣ್ಣ ಘಟನೆ’ ಎಂದು ಲಘುವಾಗಿ ಹೇಳಿರುವುದು ಖಂಡನೀಯ. ಈ ಗಲಭೆ ಪೂರ್ವಯೋಜಿತ ಸಂಚು. ನಾವು ಏನೇ ಮಾಡಿದರೂ ಸರ್ಕಾರ ನಮ್ಮ ಪರವಾಗಿರುತ್ತದೆ ಎಂಬ ಧೋರಣೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ಕಳೆದ ವರ್ಷವೂ ಇಂತಹ ಕೃತ್ಯ ನಡೆದಿತ್ತು. ಸರ್ಕಾರ, ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸದೆ ನಿರ್ಲಕ್ಷಿಸಿದ ಪರಿಣಾಮ ಮತ್ತೊಮ್ಮೆ ಮರುಕಳಿಸಿದೆ ಎಂದು ಹೇಳಿದ್ದಾರೆ.