ಮಧುಗಿರಿ: ಸಂಸಾರ ಕಲಹದಿಂದ ಬೇಸತ್ತ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗುರುವಾರ ತಾಲ್ಲೂಕಿನ ಸಿದ್ದಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಧುಗಿರಿ ಪಟ್ಟಣದ ಒಂದನೇ ಬ್ಲಾಕ್ ನಿವಾಸಿಗಳಾದ ಮಹಮ್ಮದ್ ಶಫಿ ಪತ್ನಿ ಹಸೀನಾ (25) ತನ್ನ ಮಕ್ಕಳಾದ ಅಲ್ಪಿಯಾ ಕೊನೆನ್ (3), ಅಫಿಯ ಕೊನೆನ್ (8) ಜತೆಗೆ ಕೆರೆಗೆ ಹಾರಿದ್ದಾರೆ.
ಇಬ್ಬರು ಮಕ್ಕಳು ಪಟ್ಟಣದ ಎಸ್.ಎಂ.ಶಾಲೆಯ ವಿದ್ಯಾರ್ಥಿಗಳು. ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಹೊರೆ ತೆಗೆದಿದ್ದಾರೆ. ಮಧುಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.