ಮಧುಗಿರಿ: ಇಲ್ಲಿನ ಏಕಾಶಿಲಾ ಬೆಟ್ಟದಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದೆ ಕಲ್ಲಿನ ಕೋಟೆಯಲ್ಲಿ ಗಿಡಗಳು ಬೆಳೆದು, ಮರಗಳಾಗಿ ಬೇರುಗಳು ಆಳವಾಗಿ ಇಳಿದು ಕಲ್ಲುಗಳು ಸಡಿಲವಾಗಿ ಬೀಳುವ ಹಂತ ತಲುಪುತ್ತಿವೆ. ಕೋಟೆ ಆವರಣದಲ್ಲಿ ಅನುಪಯುಕ್ತ ಗಿಡಗಳು ಆಳೆತ್ತರ ಬೆಳೆದು ಹಾವು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ಪ್ರವಾಸಿಗರು ಈ ಬೆಟ್ಟಕ್ಕೆ ಚಾರಣ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಉತ್ತಮ ಮಳೆಯಿಂದಾಗಿ ಏಕಾಶಿಲಾ ಬೆಟ್ಟದ ಆವರಣ ಹಾಗೂ ಕಲ್ಲಿನ ಕೋಟೆಗಳಲ್ಲಿ ಗಿಡಗಳು ಬೆಳೆದು ಮರಗಳ ಬೇರುಗಳು ಆಳವಾಗಿ ಕೋಟೆಯ ಒಳಗೆ ಹೋಗಿ ಕಲ್ಲುಗಳನ್ನು ಸಡಿಲ ಮಾಡುತ್ತಿರುವುದರಿಂದ ಕಲ್ಲುಗಳು ಹೊರ ಬಂದು ಬೀಳುವ ಹಂತ ತಲುಪುತ್ತಿವೆ. ಕೋಟೆಗಳನ್ನು ಸಂರಕ್ಷಣೆ ಮಾಡದಿದ್ದರೆ ಸಂಪೂರ್ಣವಾಗಿ ಹಾಳಾಗುವ ಆತಂಕ ಎದುರಾಗಿದೆ.

ಇತ್ತೀಚೆಗೆ ಸುರಿದ ಮಳೆಗೆ ಸುಂದರ ಗೋಡೆ ಸಂಪೂರ್ಣವಾಗಿ ಕುಸಿದಿದೆ. ಈವರೆಗೂ ಅದನ್ನು ಸರಿಪಡಿಸಲು ಯಾವ ಅಧಿಕಾರಿಗಳೂ ಮುಂದಾಗಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ಹೀಗೆ ನಿರ್ಲಕ್ಷ್ಯ ಮಾಡಿದರೆ ಇತಿಹಾಸ ಹೇಳುವ ಸುಂದರ ಕೋಟೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಕೋಟೆಯ ಪ್ರವೇಶ ದ್ವಾರದಿಂದಲೇ ಅನುಪಯುಕ್ತ ಗಿಡಗಳು ಆಳೆತ್ತರ ಬೆಳೆದಿರುವುದರಿಂದ ಕಾಲಿಡಲು ಪ್ರವಾಸಿಗರು ಭಯಪಡುತ್ತಿದ್ದಾರೆ. ಎಲ್ಲಿ ನೋಡಿದರೂ ಗಿಡಗಳು ಬೆಳೆದಿವೆ. ಯಾವ ಪೊದೆಯಲ್ಲಿ ಏನಿದೆಯೂ ಎಂಬ ಭಯ ಕಾಡುತ್ತಿದೆ

ಏಕಾಶಿಲಾ ಬೆಟ್ಟದ ವೀಕ್ಷಣೆ ಮತ್ತು ಚಾರಣ ಕೈಗೊಳ್ಳಲು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಬಂದಿದ್ದೇವೆ. ಆದರೆ ಕೋಟೆಯ ಆವರಣದಲ್ಲಿ ಬೆಳದಿರುವ ಗಿಡಗಳನ್ನು ನೋಡಿ ಭಯವಾಗುತ್ತಿದೆ. ಇಂತಹ ಸುಂದರ ತಾಣ ಸರಿಯಾಗಿ ನಿರ್ವಹಣೆ ಇಲ್ಲದೆ ಹಾವು ಮತ್ತು ಸೊಳ್ಳೆಗಳ ತಾಣವಾಗಿರುವುದು ನೋವಿನ ಸಂಗತಿ ಎನ್ನುತ್ತಾರೆ ಪ್ರವಾಸಿಗ ರಾಜೇಶ್.

ಬೆಟ್ಟದಲ್ಲಿರುವ ತಾಣಗಳ ರಕ್ಷಣೆ, ಸ್ವಚ್ಛತೆ ಹಾಗೂ ಮೂಲ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಏಕಾಶಿಲಾ ಬೆಟ್ಟ ಮತ್ತಷ್ಟು ಹೆಸರುಗಳಿಸಿ ತಾಲ್ಲೂಕು ಕೂಡ ಅಭಿವೃದ್ಧಿಯಾಗುತ್ತದೆ ಎಂದು ಕೋಲಾರದ ಶಿವಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.