ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲೆ ಮನೆಗೆ ತೆರಳಿ ಆಧಾರ್ ನೋಂದಣಿ 

ಮಾನವೀಯತೆ ಮೆರೆದ ತಹಶೀಲ್ದಾರ್‌ ಮಮತಾ
Last Updated 25 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಗುಬ್ಬಿ: ಅಂಗವಿಕಲೆ ಮನೆಗೆ ಸ್ವತಃ ತಹಶೀಲ್ದಾರ್‌ ಮಮತಾ ಭೇಟಿ ನೀಡಿ ಆಧಾರ್‌ ನೋಂದಣಿ ಮಾಡಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ನಿಟ್ಟೂರು ಹೋಬಳಿಯ ಎಂ.ಎನ್. ಕೋಟೆ ಗ್ರಾಮದ ಸುಶೀಲ ಎಂಬುವವರು ಮೂರು ವರ್ಷಗಳ ಹಿಂದೆ ಕಾಲಿಗೆ ಪೆಟ್ಟು ಬಿದ್ದು ನಡೆದಾಡದ ಸ್ಥಿತಿಗೆ ತಲುಪಿದ್ದರು. ದಿನಕಳೆದಂತೆ ದೇಹವೂ ಸ್ವಾಧೀನ ಕಳೆದುಕೊಂಡು ಮೇಲೇಳಲಾಗದೆ ಸಂಪೂರ್ಣ ಹಾಸಿಗೆ ಹಿಡಿದಿದ್ದಾರೆ.

ಅನಾರೋಗ್ಯ ಪೀಡಿತ ಸುಶೀಲ ಅವರನ್ನು ಪತಿಯೂ ತ್ಯಜಿಸಿದ್ದಾನೆ. ಕಡುಬಡತನದ ಕುಟುಂಬದಲ್ಲಿ ವಯಸ್ಸಾದ ತಂದೆ, ತಾಯಿ ಆಶ್ರಯದಲ್ಲಿ ಸುಶೀಲಾ ಬದುಕುತ್ತಿದ್ದಾರೆ.

ಈ ಸುದ್ದು ತಿಳಿದ ತಹಶೀಲ್ದಾರ್ ಮಮತ ಎಂ.ಆಧಾರ್ ಕಿಟ್ ಮತ್ತು ಸಿಬ್ಬಂದಿ ಸಮೇತ ಮನೆಗೆ ಭೇಟಿ ನೀಡಿ ಕೆಲವು ವಿಶೇಷ ಸಂದರ್ಭಗಳಲ್ಲಿ ಕಣ್ಣಿನ ಗುರುತನ್ನು ಪಡೆದುಕೊಂಡು ಆಧಾರ್ ನೋಂದಣಿ ಮಾಡಿಸಲು ಅವಕಾಶವಿರುವುದನ್ನು ಬಳಸಿಕೊಂಡು ಈಕೆಯ ಆಧಾರ್ ನೋಂದಣಿ ಮಾಡಿ ಮಾಸಾಶನ ಪಡೆಯಲು ಅವಕಾಶ ಕಲ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT