ತಹಶೀಲ್ದಾರ್ ಎಸಿಬಿ ಬಲೆಗೆ

7

ತಹಶೀಲ್ದಾರ್ ಎಸಿಬಿ ಬಲೆಗೆ

Published:
Updated:

ಪಾವಗಡ: ತಹಶೀಲ್ದಾರ್ ಕೋರ್ಟ್‌ನಲ್ಲಿದ್ದ ಜಮೀನಿಗೆ ಸಂಬಂಧಪಟ್ಟ ಪ್ರಕರಣ ಮುಕ್ತಾಯ ಮಾಡಲು ನರಸಿಂಹಯ್ಯ ಎಂಬುವರಿಂದ ಹಣ ಪಡೆಯುತ್ತಿದ್ದ ತಹಶೀಲ್ದಾರ್ ಟಿ.ಕೆ.ತಿಪ್ಪೂರಾವ್ ಅವರನ್ನು ಎಸಿಬಿ ತಂಡ ಬುಧವಾರ ಬಂಧಿಸಿದೆ.

ನರಸಿಂಹಯ್ಯ ಅವರ ಪಿತ್ರಾರ್ಜಿತ ಜಮೀನಿಗೆ ಸಂಬಂಧಿಸಿದ ಪ್ರಕರಣ ತಹಶೀಲ್ದಾರ್ ನ್ಯಾಯಾಲಯದಲ್ಲಿತ್ತು. ಅಣ್ಣ ತಮ್ಮಂದಿರು ಒಪ್ಪಿಗೆ ಪತ್ರ ಕೊಟ್ಟಿದ್ದರೂ ಪ್ರಕರಣ ಮುಕ್ತಾಯಗೊಳಿಸಿ ಆದೇಶ ಕೊಟ್ಟಿರಲಿಲ್ಲ. ಆದೇಶ ನೀಡಲು ₹ 10 ಸಾವಿರ ಕೊಡುವಂತೆ ತಹಶೀಲ್ದಾರ್ ಒತ್ತಾಯಿಸಿದ್ದರು ಎಂದು ನರಸಿಂಹಯ್ಯ ದೂರು ನೀಡಿದ್ದರು.

ಬುಧವಾರ ತಹಶೀಲ್ದಾರ್ ಅವರ ಬಾಡಿಗೆ ಮನೆಯಲ್ಲಿ ನರಸಿಂಹಯ್ಯ ಅವರಿಂದ ಹಣ ಪಡೆಯುವಾಗ ತುಮಕೂರಿನ ಎಸಿಬಿ ತಂಡ ಬಂಧಿಸಿದೆ.

ಎಸಿಬಿ ಡಿವೈಎಸ್‌ಪಿ ಮೋಹನ್, ಸಿಬ್ಬಂದಿ ತಂಡದಲ್ಲಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !