ಗುರುವಾರ , ನವೆಂಬರ್ 14, 2019
22 °C

ಅಪಘಾತ; ಬೈಕ್‌ ಸವಾರ ಸಾವು

Published:
Updated:

ತುಮಕೂರು: ತಾಲ್ಲೂಕಿನ ಬೆಳ್ಳಾವಿ ಹತ್ತಿರ ಒಕ್ಕೋಡಿ ಸಮೀಪ ದ್ವಿಚಕ್ರವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಯತೀಶ್(30) ಎಂಬುವರು ಮೃತಪಟ್ಟಿದ್ದಾರೆ.

ಇವರು ತುಮಕೂರಿನ ಬಟವಾಡಿ ನಿವಾಸಿಯಾಗಿದ್ದು, ದ್ವಿಚಕ್ರವಾಹನದಲ್ಲಿ ಒಬ್ಬರೇ ಬೆಳ್ಳಾವಿ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದರು. ಅಪಘಾತ ಸಂಭವಿಸಿದಾಗ ತೀವ್ರವಾಗಿ ಗಾಯಗೊಂಡಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ.

ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)