ಸೋಮವಾರ, ಜನವರಿ 25, 2021
26 °C
ಅಶ್ಲೀಲ ಚಿತ್ರ, ವಿಡಿಯೊ ಕಳುಹಿಸಿದ ಆರೋಪ

ಅಶ್ಲೀಲ ವಿಡಿಯೊ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಶ್ಲೀಲ ವಿಡಿಯೊ ಮತ್ತು ಚಿತ್ರ ಕಳುಹಿಸಿದ ಆರೋಪದ ಮೇಲೆ ಜಿಲ್ಲೆಯಲ್ಲಿ ಇಬ್ಬರ ಮೇಲೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಬಗ್ಗೆ ಸಿಐಡಿ ಪೊಲೀಸರು ಸಿಇಎನ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆರೋಪಿಗಳ ಮನೆಯ ಬಳಿ ಇವರ ಬಗ್ಗೆ ಗೋಪ್ಯ ವಿಚಾರಣೆ ನಡೆಸಿದ್ದರು. ಬಾತ್ಮೀದಾರರಿಂದ ಆರೋಪಿಗಳ ಬಗ್ಗೆ ಮಾಹಿತಿ ಸಹ ಸಂಗ್ರಹಿಸಿದ್ದರು.

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಹುಲಿಕಟ್ಟೆ ಗ್ರಾಮದ ಎಚ್‌. ರವಿಕುಮಾರ್ ಫೇಸ್‌ಬುಕ್ ಮೆಸೆಂಜರ್ ಮೂಲಕ ಬೇರೆಯವರಿಗೆ ಅಶ್ಲೀಲ ಚಿತ್ರ ಕಳುಹಿಸಿದ್ದರು. ಸದ್ಯ ಬೆಂಗಳೂರಿನ ಜೆ.ಪಿ. ನಗರದಲ್ಲಿ ವಾಸವಾಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಫೇಸ್‌ಬುಕ್ ಮೆಸೆಂಜರ್ ಮೂಲಕ ಅಶ್ಲೀಲ ವಿಡಿಯೊ ಕಳುಹಿಸಿದ ಆರೋಪದ ಮೇಲೆ ಪಾವಗಡ ತಾಲ್ಲೂಕು ನಿಡಗಲ್ ಹೋಬಳಿ ಮಂಗಳವಾಡ ಗ್ರಾಮದ ರವಿಚಂದ್ರ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.