ಕುಣಿಗಲ್: ಪಟ್ಟಣದ ಕುವೆಂಪು ನಗರದ ಶೆಡ್‌ನಲ್ಲಿ ಸೋಮವಾರ ಬಾಗೇನಹಳ್ಳಿ ರವಿ ಅವರ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಳವಳ್ಳಿ ಶಿವಕುಮಾರ ಅವರನ್ನು ಕುಣಿಗಲ್ ಬಂಧಿಸಿದ್ದಾರೆ.
ಕೊಲೆ ಮಾಡಿ ಪರಾರಿಯಾಗಿದ್ದ ಶಿವಕುಮಾರ್‌ಗೆ ಬಂಧನದ ಭೀತಿಯಿಂದಾಗಿ ಪಾಂಡವಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಮಾಹಿತಿ ತಿಳಿದ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.