ಶುಕ್ರವಾರ, ಜೂನ್ 25, 2021
29 °C
ಕೃಷಿ ಇಲಾಖೆ ಉಪ ನಿರ್ದೇಶಕ ಡಿ.ಉಮೇಶ್‌ ಎಚ್ಚರಿಕೆ

ಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ: ಕೃಷಿ ಇಲಾಖೆ ಉಪ ನಿರ್ದೇಶಕ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಗೊಬ್ಬರಕ್ಕೆ ರೈತರಿಂದ ಬೇಡಿಕೆ ಹೆಚ್ಚಾದ ಸಮಯದಲ್ಲಿ ಗೊಬ್ಬರದ ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಡಿ.ಉಮೇಶ್‌ ತಿಳಿಸಿದರು.

‌ಪಟ್ಟಣದ ವಿವಿಧ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ಪರವಾನಗಿ, ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನಿನ ಪರಿಶೀಲನೆ ನಡೆಸಿ ಮಾತನಾಡಿದರು.

ಯೂರಿಯಾ ಅಥವಾ ಇತರೆ ಗೊಬ್ಬರಗಳ ಜತೆ ಬೇರೊಂದನ್ನು ಲಿಂಕ್ ಮಾಡುವುದು ಕಂಡು ಬಂದರೆ ಶಿಸ್ತು ಕ್ರಮ‌ಕೈಗೊಳ್ಳಲಾಗುವುದು. ನಕಲಿ ಬೀಜ ಮಾರಾಟ ಕಂಡು ಬಂದಲ್ಲಿ  ಪರವಾನಗಿ ರದ್ದು ಮಾಡ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೃಷಿ ಇಲಾಖೆಯ ಎಎಒ ಮಲ್ಲಿಕಾರ್ಜುನ್‌, ತಿಪ್ಪೇಸ್ವಾಮಿ ಇದ್ದರು.

***

ಯೂರಿಯಾ ಅಧಿಕ ಬಳಕೆ ಬೇಡ

ಯೂರಿಯಾ ಗೊಬ್ಬರವನ್ನು ಅಧಿಕವಾಗಿ ಬಳಸಬಾರದು. ಒಂದು ಏಕರೆ ರಾಗಿ ಸೇರಿದಂತೆ ಇತರ ಬೆಳೆಗಳಿಗೆ 20 ಕೆ.ಜಿ. ಸಾಕಾಗುತ್ತದೆ. ಯೂರಿಯಾ ಬೇವು ಲೇಪಿತ ಆಗಿರುವುದರಿಂದ ಕಡಿಮೆ ಬಳಸಿದರೆ ಸಾಕು.

– ಡಿ.ಉಮೇಶ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.