ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಸಾವಿರ ಜನರ ಸೇರಿಸಿ: ಪರಮೇಶ್ವರ

Last Updated 26 ಸೆಪ್ಟೆಂಬರ್ 2022, 16:35 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಅ. 8ರಿಂದ ಪ್ರಾರಂಭವಾಗಲಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಕನಿಷ್ಠ 5 ಸಾವಿರ ಜನ ರಾಹುಲ್‌ಗಾಂಧಿ ಜತೆ ಹೆಜ್ಜೆ ಹಾಕಬೇಕು ಎಂದು ಶಾಸಕ ಡಾ.ಜಿ. ಪರಮೇಶ್ವರ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಭಾರತ್ ಜೋಡೊಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ರಾಹುಲ್‌ ಗಾಂಧಿ ಭಾರತ್‌ ಜೋಡೊ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಸಮಯ ಕಳೆಯಲಿದ್ದಾರೆ. ಇದನ್ನು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ಯಾತ್ರೆಯು ಆದಿಚುಂಚನಗಿರಿ, ತುರುವೇಕೆರೆ, ಚಿಕ್ಕನಾಯಕಹಳ್ಳಿ, ಹುಳಿಯಾರು ಮೂಲಕ ಚಿತ್ರದುರ್ಗ ಜಿಲ್ಲೆಗೆ ತೆರಳಬೇಕಿತ್ತು. ಈ ಮಾರ್ಗದಲ್ಲಿ ಹಳ್ಳಿಗಳು ಕಡಿಮೆ ಇದ್ದು, ಕೆಪಿಸಿಸಿ ಅಧ್ಯಕ್ಷರು ಮಾರ್ಗ ಬದಲಾವಣೆ ಮಾಡಿದ್ದಾರೆ. ಆದರೆ, ಈಗ ಮೂಲ ಮಾರ್ಗದಲ್ಲಿಯೇ ಯಾತ್ರೆ ಸಾಗಬೇಕು ಎಂದು ರಾಹುಲ್‌ಗಾಂಧಿ ಕಚೇರಿಯಿಂದ ಪತ್ರ ಬಂದಿದೆ. ಈ ಮಾರ್ಗದಲ್ಲಿ ತಾಂತ್ರಿಕ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ಶಾಸಕರಾದ ಡಾ.ರಂಗನಾಥ್, ವೆಂಕಟರಮಣಪ್ಪ, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ, ಮುಖಂಡರಾದ ಉಮಾಶ್ರೀ, ವಿ.ಎಸ್. ಉಗ್ರಪ್ಪ, ಟಿ.ಬಿ.ಜ ಯಚಂದ್ರ, ಪ್ರಸನ್ನಕುಮಾರ್, ಹೊನ್ನಗಿರಿಗೌಡ, ಪುಷ್ಪಾ ಅಮರನಾಥ್, ಬಿ.ಬಿ. ರಾಮ ಸ್ವಾಮಿ ಗೌಡ, ಆರ್.ನಾರಾಯಣ್, ಷಡಕ್ಷರಿ, ರಫೀಕ್ ಅಹ್ಮದ್‌, ಬೆಮಲ್ ಕಾಂತರಾಜು, ವೆಂಕಟೇಶ್, ಗುರು ಪ್ರಸಾದ್, ರಾಯಸಂದ್ರ ರವಿಕುಮಾರ್, ವೈ.ಸಿ. ಸಿದ್ದರಾಮಯ್ಯ, ಯಲಚವಾಡಿ ನಾಗರಾಜ್, ಅತೀಕ್ ಅಹಮದ್, ಇಕ್ಬಾಲ್ ಅಹಮದ್, ಎಚ್.ಸಿ. ಹನು ಮಂತಯ್ಯ, ಕೆಂಚ ಮಾರಯ್ಯ, ಡಿ.ಟಿ. ವೆಂಕಟೇಶ್, ಲೊಕೇಶ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT