ಕುಣಿಗಲ್: ನಿವೃತ್ತ ನೌಕರರು ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನಹರಿಸಿ, ‘ಮನ, ಮನೆ, ಮನಿ’ ಮತ್ತು ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಸಮಿತಿ ಸಂಘಟನ ಕಾರ್ಯದರ್ಶಿ ಪ್ರಹ್ಲಾದ್ ಸಲಹೆ ನೀಡಿದರು.

ತಾಲ್ಲೂಕು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕೋತ್ಸವ ಮತ್ತು 75 ವರ್ಷ ಪೂರೈಸಿದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಸರ್ಕಾರಿ ನೌಕರರಿಗಿಂತ ನಿವೃತ್ತ ಸರ್ಕಾರಿ ನೌಕರರು ಹೆಚ್ಚಾಗಿದ್ದಾರೆ. ಸಂಘಟಿತ ಹೋರಾಟದ ಫಲವಾಗಿ ಸವಲತ್ತುಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಸಂಘಟನೆ ಮತ್ತಷ್ಟೂ ಬಲವಾಗಬೇಕಿದೆ ಎಂದರು.

ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ನಿವೃತ್ತರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಕುಟುಂಬದ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಪ್ರವೃತ್ತಿಗಳನ್ನು ರೂಢಿಸಿಕೊಂಡು ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಶಿಸ್ತುಬದ್ಧ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶತಾಯಿಷಿಗಳಾದ ವೈ.ಎ. ಶ್ರೀನಿವಾಸ್ ಶೆಟ್ಟಿ, 75 ವರ್ಷ ಪೂರೈಸಿದ ಹನುಮಂತಯ್ಯ, ಕೆಂಪೇಗೌಡ, ಕಾಡಯ್ಯ, ಮಾದಯ್ಯ, ರಂಗಮ್ಮ, ಜಯಮ್ಮ, ಶ್ರೀನಿವಾಸ್ ಮೂರ್ತಿ, ರಮಾಮಣಿ, ಕೆ.ಕೆ.ರಾಮಯ್ಯ, ಮುದ್ದಹನುಮಯ್ಯ ಅವರನ್ನು ಸತ್ಕರಿಸಲಾಯಿತು.

ತಾಲ್ಲೂಕು ಘಟಕದ ಗೌರವಾಧ್ಯಕ್ಷ ಕೆ.ಎ.ಪಿ.ಗುಪ್ತ, ಅಧ್ಯಕ್ಷ ಚನ್ನರಾಯಪ್ಪ, ಜಿಲ್ಲಾ ಘಟಕದ ಪುಟ್ಟನರಸಯ್ಯ, ಪದಾಧಿಕಾರಿಗಳಾದ ನಾರಾಯಣ್, ಕೆ.ಎಚ್.ನಾಗರಾಜು, ರಾಧಕೃಷ್ಣ, ಶಿವಮ್ಮ, ವಿಜಯ ಕುಮಾರ್, ಮಾಯಣ್ಣ ಮತ್ತು ನಿರ್ದೇಶಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.