ತುಮಕೂರು: ನಗರೀಕರಣ, ಕೈಗಾರಿಕೀಕರಣದ ಹೆಸರಿನಲ್ಲಿ ಜಲಮೂಲ, ನದಿಪಾತ್ರ ಬರಿದು ಮಾಡಿದರೆ ಮನುಕುಲ ಸೇರಿದಂತೆ ಇಡೀ ಜೀವ ಸಂಕುಲವೇ ಅಪಾಯಕ್ಕೆ ಸಿಲುಕಲಿದೆ ಎಂದು ಜಲಸಂಪನ್ಮೂಲ ಇಲಾಖೆ ನಿವೃತ್ತ ಕಾರ್ಯದರ್ಶಿ ಕೆ.ಜೈಪ್ರಕಾಶ್ ಎಚ್ಚರಿಸಿದರು.

ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಎಂಜಿನಿಯರುಗಳ ಸಂಸ್ಥೆ (ಐಇಐ) ಸಹಯೋಗದಲ್ಲಿ ‘ಉತ್ತಮ ಜಗತ್ತು ರೂಪಿಸಲು ಸ್ಮಾರ್ಟ್ ಎಂಜಿನಿಯರಿಂಗ್ ಹಾಗೂ ರಾಜ್ಯದ ನೀರಿನ ಪರಿಸ್ಥಿತಿ’ ಕುರಿತು ಮಾತನಾಡಿದರು.

ಜನಸಂಖ್ಯೆ ಬೆಳೆಯುತ್ತಲೇ ಸಾಗಿದ್ದು, ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಇರುವ ಜಲಮೂಲವನ್ನು ಮಾಲಿನ್ಯ ರಹಿತವಾಗಿ ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಎಂಜಿನಿಯರುಗಳ ಪಾತ್ರ ಪ್ರಮುಖವಾಗಿದೆ. ನೀರಿನ ಸಂರಕ್ಷಣೆ ವಿಚಾರದಲ್ಲಿ ಎಚ್ಚರಿಕೆಯಿಂದ ಯೋಜನೆ ರೂಪಿಸಿ ಕಾರ್ಯ ರೂಪಕ್ಕೆ ತರಬೇಕು ಎಂದರು.

ಎಸ್ಐಟಿ ಸಿಇಒ ಶಿವಕುಮಾರಯ್ಯ, ಪ್ರಾಂಶುಪಾಲ ಪ್ರೊ.ಎಸ್.ವಿ.ದಿನೇಶ್, ಐಇಐ ಅಧ್ಯಕ್ಷ ಆರ್.ಸುರೇಶ್, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಪವನ್ ಕುಮಾರ್, ಆನಂದ್, ಮಾದವ್, ಗಣೇಶ್, ತಿರುಮಲೇಶ್ ಉಪಸ್ಥಿತರಿದ್ದರು. ಪವನ್ಕುಮಾರ್ ಯಮ್ನಿ ಸ್ವಾಗತಿಸಿ, ರೂಪ ನಿರೂಪಿಸಿ ಎನ್.ಚಕ್ರವರ್ತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.