ಬುಧವಾರ, ಏಪ್ರಿಲ್ 14, 2021
31 °C

ಆಹಾರ ಸಂಸ್ಕರಣೆ: ಗ್ರಾಹಕರ ಸುರಕ್ಷತೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತಿನಿಸುಗಳ ತಯಾರಿಕಾ ಕಂಪನಿಗಳು ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸಂಸ್ಕರಿಸಬೇಕು ಎಂದು ಕೇಂದ್ರೀಯ ಆಹಾರ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಎಫ್‌ಟಿಆರ್‌ಐ) ಯೋಜನಾಧಿಕಾರಿ ಗಿರಿಯಪ್ಪ ಕೊಳ್ಳನ್ನವರ್ ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು(ಕಾಸಿಯಾ) ಆಯೋಜಿಸಿದ್ದ ‘ಆಹಾರ ಸಂಸ್ಕರಣೆ’ ಕುರಿತ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆಹಾರ ಸಂಸ್ಕರಣೆಗೆ ಲಭ್ಯವಿರುವ ತಂತ್ರಜ್ಞಾನದ ಮಾಹಿತಿ, ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಮಾಹಿತಿ ನೀಡಿದರು. ಆಹಾರ ಸಂರಕ್ಷಣೆ ಹಾಗೂ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟು ಗೋಧಿ, ಹುಣಸೆಹಣ್ಣು, ಅರಿಶಿನದ ಪುಡಿ ಉತ್ಪನ್ನಗಳ ಸಂಸ್ಕರಣೆ ಬಗ್ಗೆ ಮಾಹಿತಿ ಹಂಚಿಕೊಂಡರು.

ನವ ಉದ್ಯಮಿಗಳಲ್ಲಿ ಹೊಸ ಉತ್ಪನ್ನಗಳ ತಯಾರಿಕೆ ಕುರಿತು ಪರಿಕಲ್ಪನೆ ಇದ್ದಲ್ಲಿ ಸಿಎಫ್‌ಟಿಆರ್‌ಐ ಅನ್ನು ಸಂಪರ್ಕಿಸಿದರೆ, ಘಟಕ ಆರಂಭಕ್ಕೆ ಬೇಕಾದ ತಾಂತ್ರಿಕಾ ಸಲಹಾ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

ಕಾಸಿಯಾ ಅಧ್ಯಕ್ಷ ಆರ್.ರಾಜು, ಪ್ರಧಾನ ಕಾರ್ಯದರ್ಶಿ ಎಂ.ಜಿ ರಾಜ್‍ಗೋಪಾಲ್, ಉಪಾಧ್ಯಕ್ಷ ಕೆ.ಬಿ ಅರಸಪ್ಪ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಿರೇಮಠ್ ಹಾಗೂ ನಿಕಟಪೂರ್ವ ಅಧ್ಯಕ್ಷ ಲೋಕೇಶ್, ಕಾಸಿಯಾ ಗ್ರಾಮೀಣಾಭಿವೃದ್ಧಿ ಸದಸ್ಯ ಸದಾಶಿವ ಅಮಿನ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.