ದಿನಪೂರ್ತಿ ಸೋನೆ ಮಳೆ; ಮುದುಡಿ ಮಲಗಿದ ಜನ

7

ದಿನಪೂರ್ತಿ ಸೋನೆ ಮಳೆ; ಮುದುಡಿ ಮಲಗಿದ ಜನ

Published:
Updated:
Deccan Herald

ತುಮಕೂರು: ಕೆಲ ದಿನಗಳಿಂದ ಸಂಜೆ ಸ್ವಲ್ಪ ಮಳೆ ಬಂದು ಹೋಗುತ್ತಿತ್ತು. ಆದರೆ, ಭಾನುವಾರ ಬೆಳಿಗ್ಗೆಯಿಂದ ಸೋನೆಯಾಗಿ ಸುರಿಯಿತು.

ಬೆಳ್ಳಂ ಬೆಳಿಗ್ಗೆಯೇ ಶುರುವಾದ ಸೋನೆ ಮಳೆ ಕಂಡ ರಜೆಯ ಮೂಡ್‌ನಲ್ಲಿದ್ದ ಜನರು ಮತ್ತೆ ಮುದುಡಿಕೊಂಡು ನಿದ್ರೆಗೆ ಜಾರಿದರು. ಮತ್ತೊಂದಿಷ್ಟು ಜನರು ಉಪಹಾರದ ಜೊತೆಗೆ ವಿಶೇಷ ಖಾದ್ಯಗಳನ್ನು ಸವಿದರು.

ಬೆಳಿಗ್ಗೆಯಿಂದಲೂ ಸಂಜೆಯವರೆಗೂ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಗೂಡು ಸೇರಿದ್ದ ಕೊಡೆಗಳನ್ನು ಹಿಡಿದು ಸಂಜೆ ಜನರು ಮನೆಯಿಂದ ಹೊರಬಿದ್ದರು.

ಎಂ.ಜಿ.ರಸ್ತೆ, ಎಸ್.ಎಸ್.ಎಸ್.ಪುರಂ, ಮಂಡಿಪೇಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ಕೊಡೆಗಳನ್ನು ಹಿಡಿದು ದಿನಸಿ, ಬಟ್ಟೆ ಸೇರಿ ವಿವಿಧ ವಸ್ತುಗಳ ಖರೀದಿಗೆ ಬಂದಿದ್ದು ಕಂಡಿತು.

ಭಾನುವಾರದ ಭರಫೂರ ವ್ಯಾಪಾರ ನಿರೀಕ್ಷೆಯಲ್ಲಿದ್ದ ಅಂಗಡಿಗಳಲ್ಲಿ ಅಷ್ಟೊಂದು ಗ್ರಾಹಕರು ಕಾಣಲಿಲ್ಲ. ಇನ್ನು ಫುಟ್‌ ಪಾತ್ ವ್ಯಾಪಾರಾಸ್ಥರು ಪ್ಲಾಸ್ಟಿಕ್ ಟಾರ್ಪಾಲಿನ್ ಹಾಕಿಕೊಂಡು ಮಳೆ, ಚಳಿಯಲ್ಲಿ ನಿಂತು ವ್ಯಾಪಾರ ಮಾಡಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !