ಗುಡ್ಡದ ಪಕ್ಕದ ರಸ್ತೆ ಮುಚ್ಚಿ ಹೋಗಿ ಜಮೀನುಗಳಿಗೆ, ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮುಚ್ಚಿಹೋಗಲಿದೆ. ನಿಡಗಲ್ ದುರ್ಗದ ಮೊದಲನೇ ಗ್ರಾಮ ಎಂದು ಈ ಪ್ರದೇಶವನ್ನು ಕರೆಯಲಾಗುತ್ತದೆ. ಸುತ್ತಮುತ್ತಲ ಪ್ರದೇಶದಲ್ಲಿ ಐತಿಹಾಸಿಕ ಸ್ಮಾರಕಗಳು, ದೇಗುಲಗಳ ಪಳೆಯುಳಿಕೆಗಳಿವೆ. ಇದೇ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡಗಳನ್ನು ನೆಟ್ಟಿದ್ದಾರೆ. ಇವೆಲ್ಲವುಗಳನ್ನು ಹಾಳು ಮಾಡಿ ಕೆಲವರು ಕಟ್ಟಡ ನಿರ್ಮಿಸುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.