ತುಮಕೂರು, ಶಿರಾ, ತುರುವೇಕೆರೆ, ತಿಪಟೂರು, ಮಧುಗಿರಿ ಸೇರಿದಂತೆ 7 ಘಟಕಗಳ ಚಾಲಕರು, ನಿರ್ವಾಹಕರು, ಕಚೇರಿ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಓಟ, ಗುಂಡು ಎಸೆತ, ಜಾವೆಲಿನ್ ಎಸೆತ, ಉದ್ದ ಜಿಗಿತ, ರಿಲೇ, ವಾಲಿಬಾಲ್ ಒಳಗೊಂಡಂತೆ ಇತರೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.