ಆರ್ಯ ಭಾರತಿಗೆ ಉತ್ತಮ ವಿದ್ಯಾರ್ಥಿ ಘಟಕ ಪ್ರಶಸ್ತಿ

7

ಆರ್ಯ ಭಾರತಿಗೆ ಉತ್ತಮ ವಿದ್ಯಾರ್ಥಿ ಘಟಕ ಪ್ರಶಸ್ತಿ

Published:
Updated:
Deccan Herald

ತುಮಕೂರು: ಭಾರತೀಯ ತಾಂತ್ರಿಕ ಶಿಕ್ಷಣ ಸಮಾಜ (ಐಎಸ್‌ಟಿಇ) ಕರ್ನಾಟಕ ವಿಭಾಗದಿಂದ ನೀಡುವ ರಾಜ್ಯ ಮಟ್ಟದ ಉತ್ತಮ ವಿದ್ಯಾರ್ಥಿ ಘಟಕ ಪ್ರಶಸ್ತಿಯು ಎರಡನೇ ಬಾರಿಗೆ ನಗರದ ಆರ್ಯಭಾರತಿ ಪಾಲಿಟೆಕ್ನಿಕ್‌ಗೆ ಸಂದಿದೆ.

ಬೀದರ್ ಜಿಲ್ಲೆ ಬಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಐಎಸ್‌ಟಿಇ ರಾಜ್ಯ ಮಟ್ಟದ 21ನೇ ಉಪನ್ಯಾಸಕರ ಸಮ್ಮೇಳನದಲ್ಲಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಐಎಸ್‌ಟಿಇ ಅಧ್ಯಕ್ಷ ಪ್ರೊ.ಪ್ರತಾಪ್ ಕಾಕೋಸ ದೇಸಾಯಿ, ಡಾ.ಸಿ.ಕೆ.ಸುಬ್ಬರಾಯ, ಕಾರ್ಯದರ್ಶಿ ಪ್ರೊ.ನಿಜಾನಂದ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯಮಟ್ಟದಲ್ಲಿಯೇ ಅತೀ ಹೆಚ್ಚು ಉತ್ತಮ ಕಾರ್ಯಚಟುವಟಿಕೆಗಳನ್ನು ಆಯೋಜಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !