ಆರ್ಯವೈಶ್ಯ ಸಮಾಜದ ಏಳಿಗೆಗೆ ಬದ್ಧ: ದೇವೇಗೌಡ

ಬುಧವಾರ, ಏಪ್ರಿಲ್ 24, 2019
32 °C
ತುಮಕೂರು ಜಿಲ್ಲಾ ಆರ್ಯವೈಶ್ಯ ಜನಾಂಗದ ಚಿಂತಕರ ಸಭೆಯಲ್ಲಿ ಹೇಳಿಕೆ

ಆರ್ಯವೈಶ್ಯ ಸಮಾಜದ ಏಳಿಗೆಗೆ ಬದ್ಧ: ದೇವೇಗೌಡ

Published:
Updated:
Prajavani

ತುಮಕೂರು: ‘ಆರ್ಯ ವೈಶ್ಯ ಸಮಾಜದ ಅಶಯಕ್ಕೆ ಪೂರಕವಾಗಿ ಸ್ಪಂದಿಸಿ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಬೆಂಬಲಿಸಿ ದೇಶದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ನೆಲೆ ನಿಲ್ಲಲು ಸಹಕರಿಸಬೇಕು’ ಎಂದು ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಭಾನುವಾರ ತುಮಕೂರು ಜಿಲ್ಲಾ ಆರ್ಯವೈಶ್ಯ ಜನಾಂಗದ ಚಿಂತಕರ ಸಭೆಯಲ್ಲಿ ಮಾತನಾಡಿದರು.

'ಸಮುದಾಯದ ಸಮಗ್ರ ಅಭಿವೃದ್ಧಿಗೆ, ಸಂಘಟನೆ, ರಾಜಕೀಯ ಅವಕಾಶ ಸೇರಿದಂತೆ ಅನೇಕ ಅಂಶಗಳ ಬಗ್ಗೆ ಗಮನಕ್ಕೆ ತಂದಿದ್ದು, ನಿಮ್ಮ ಆಶಯಕ್ಕೆ ಪೂರಕವಾಗಿ ನಡೆಯುತ್ತೇನೆ. ಹಲವು ವರ್ಷಗಳೊಂದಿಗೆ ನಿಮ್ಮ ಸಮುದಾಯದವರೇ ಆದ ಶರವಣ ಅವರು ನನ್ನೊಂದಿಗೆ ಇದ್ದಾರೆ. ಅವರು ನಿಮ್ಮ ಸಮುದಾಯದ ಸಂಘಟನೆಗೆ ರಾಜ್ಯವ್ಯಾಪಿ ಸಂಚರಿಸಿ ಶ್ರಮಿಸುತ್ತಿದ್ದಾರೆ' ಎಂದರು.

'ಜಿಲ್ಲೆಗೆ ಸಮಪರ್ಕ ಕುಡಿಯುವ ನೀರು ಕಲ್ಪಿಸುವುದು ನನ್ನ ಆದ್ಯತೆಯ ವಿಷಯವಾಗಿದೆ. ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬಾರದು' ಎಂದು ಮನವಿ ಮಾಡಿದರು.

ಸಮುದಾಯದ ಮುಖಂಡ ಎಸ್.ಆರ್.ಶ್ರೀಧರಮೂರ್ತಿ, ಸಿ.ಎ.ಸೋಮೇಶ್ವರಗುಪ್ತ, ಸಿ.ಆರ್.ಮೋಹನ್‌ಕುಮಾರ್, ಟಿ.ಟಿ.ಸತ್ಯನಾರಾಯಣ, ಗುಬ್ಬಿ ಅಶೋಕಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !