ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಳಿ ಮಾಂಸ ಸುರಕ್ಷಿತ’ ಜಾಹೀರಾತಿಗೆ ಸಿಎಸ್ಇ ಕಿಡಿ

Last Updated 28 ಫೆಬ್ರುವರಿ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ‘ಕೋಳಿ ಮಾಂಸ ರೋಗ ನಿರೋಧಕಗಳಿಂದ ಮುಕ್ತವಾಗಿದೆ ಎಂಬ ಜಾಹೀರಾತು ಗ್ರಾಹಕರನ್ನು ಮರುಳು ಮಾಡುವ ತಂತ್ರವಾಗಿದೆ. ಆದರೆ ಕೋಳಿ ಸಾಕಣೆ ಕೇಂದ್ರಗಳಲ್ಲಿ ರೋಗ ನಿರೋಧಕಗಳ ಬಳಕೆ ಅವ್ಯಾಹತವಾಗಿದೆ’ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ) ಕಿಡಿ ಕಾರಿದೆ.

ಆಲ್ ಇಂಡಿಯಾ ಪೌಲ್ಟ್ರಿ ಡೆವಲಪ್‌ಮೆಂಟ್ ಆ್ಯಂಡ್ ಸರ್ವಿಸಸ್  ನೀಡಿದ ಜಾಹೀರಾತನ್ನು ಉಲ್ಲೇಖಿಸಿರುವ ಸಿಎಸ್ಇ, ‘ಇದು ಸಂಪೂರ್ಣ ತಪ್ಪು ಮಾಹಿತಿ ರವಾನಿಸುತ್ತದೆ’ ಎಂದಿದೆ.

2014ರಲ್ಲಿ ಸಿಎಸ್ಇ ಕೋಳಿ ಮಾಂಸಗಳ ಕುರಿತು ಅಧ್ಯಯನ ನಡೆಸಿತ್ತು. ‘ಅಧ್ಯಯನದ ಫಲಿತಾಂಶವನ್ನು ತಿರುಚಿ, ಜಾಹೀರಾತಿನಲ್ಲಿ ವಾಸ್ತವಾಂಶವನ್ನು ಮರೆಮಾಚಲಾಗಿದೆ’ ಎಂದು ಸಿಎಸ್ಇ ಹೇಳಿದೆ.

‘ಭಾರತದ ಕೋಳಿ ಸಾಕಣೆ ಉದ್ಯಮದಲ್ಲಿ ಪ್ರತಿಜೀವಕಗಳ ಬಳಕೆ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯಬೇಕೆಂದು ಜೀವ ಉಳಿಸಲು ಬಳಸುವ ಕೊಲಿಸ್ಟಿನ್‌ನಂಥ ಔಷಧಗಳನ್ನೂ ಬಳಸಲಾಗುತ್ತಿದೆ. ಇದನ್ನು ತಗ್ಗಿಸಲು ಉದ್ಯಮದ ಪ್ರಾಮಾಣಿಕ ಪ್ರಯತ್ನ ಕಾಣುತ್ತಿಲ್ಲ’ ಎಂದು ಸಿಎಸ್ಇ ಉಪ ಪ್ರಧಾನ ನಿರ್ದೇಶಕ ಚಂದ್ರ ಭೂಷಣ್ ಹೇಳಿದ್ದಾರೆ.

‘ಕೋಳಿ ಸಾಕಣೆ ಕೇಂದ್ರಗಳು ರೋಗಾಣುಗಳ ತಾಣವಾಗುತ್ತಿವೆ ಎಂಬ ವರದಿಯನ್ನೂ ನಿರ್ಲಕ್ಷಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT