ಗಮನ ಸೆಳೆದ ಯೋಗ ನಡಿಗೆ ಜಾಥಾ

ಗುರುವಾರ , ಜೂಲೈ 18, 2019
23 °C
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದಲ್ಲಿ ಜನಜಾಗೃತಿ ಜಾಥಾ

ಗಮನ ಸೆಳೆದ ಯೋಗ ನಡಿಗೆ ಜಾಥಾ

Published:
Updated:
Prajavani

ತುಮಕೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಮುನ್ನಾದಿನವಾದ ಗುರುವಾರ ನಗರದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಿಂದ ಮಹಾತ್ಮ ಗಾಂಧಿ ಕ್ರೀಡಾಂಗಣದವರೆಗೆ ಯೋಗ ನಡಿಗೆ ಜಾಥಾ ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಜೀವಮೂರ್ತಿ, ಅಶ್ವಿನಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಹರೀಶ್, ಯೋಗ ಸಮನ್ವಯಾಧಿಕಾರಿ ಡಾ.ಪ್ರಭಾಕರ್, ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಶೈಲೇಶ್ ಶರ್ಮಾ ಹಾಗೂ ಡಾ.ಗುರುಪ್ರಸಾದ್ ಅವರು ಜಾಥಾಕ್ಕೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ನರ್ಸಿಂಗ್ ಕಾಲೇಜುಗಳು, ಮತ್ತಿತರ ಇಲಾಖೆ ಹಾಗೂ ಸ್ವಯಂ ಸೇವಾ ಸಂಘಗಳ ಆಶ್ರಯದಲ್ಲಿ ಜಾಥಾ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !