ದೌರ್ಜನ್ಯದ ವಿರುದ್ಧ ಜಾಗೃತಿಗೆ ಮುಂದಾಗಿ

7
ಮಾಹಿಳಾ ಗೃಹೋಪಯೋಗಿ ವಸ್ತು ಪ್ರದರ್ಶನದಲ್ಲಿ ಸಿದ್ಧಲಿಂಗೇಗೌಡ ಸಲಹೆ

ದೌರ್ಜನ್ಯದ ವಿರುದ್ಧ ಜಾಗೃತಿಗೆ ಮುಂದಾಗಿ

Published:
Updated:

ತುಮಕೂರು: ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚುತ್ತಿವೆ. ಮಹಿಳೆಯರು ಈ ಬಗ್ಗೆ ಎಚ್ಚೆತ್ತು ಸ್ವಯಂ ರಕ್ಷಣೆ ಮತ್ತು ಜಾಗೃತಿಗೆ ಮುಂದಾಗಬೇಕು ಎಂದು ಮಾನವ ಹಕ್ಕು ಸೇವಾ ಆಯೋಗದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗೇಗೌಡ ತಿಳಿಸಿದರು.

ನಗರದ ಭಾರತಿ ಸ್ತ್ರೀ ಸಮಾಜದ ಆವರಣದಲ್ಲಿ ಮಹಿಳಾ ಭಾರತಿ ಮಾಹಿತಿ ಕೇಂದ್ರ ಹಮ್ಮಿಕೊಂಡಿದ್ದ ಮಾಹಿತಿ ಮತ್ತು ಮಾಹಿಳಾ ಗೃಹೋಪಯೋಗಿ ವಸ್ತು ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಪೀಳಿಗೆ ಇಂದು ದಾರಿ ತಪ್ಪುತ್ತಿದೆ. ಉತ್ತಮ ಆಲೋಚನೆಗಳಿಂದ ಮುನ್ನಡೆಯಬೇಕಾಗಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಸ್ವಾಮಿ ಮಾತನಾಡಿ, ‘ಮನುಷ್ಯ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾನೆ. ನಮ್ಮ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಾಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಶೋಷಣೆ ಎದುರಿಸಲು ಸಾಧ್ಯ’ ಎಂದು ಹೇಳಿದರು.

ಎಂಜಿನಿಯರಿಂಗ್ ಸಂಘದ ಅಧ್ಯಕ್ಷ ರಾಮಮೂರ್ತಿ, ‘ಬೃಹತ್ ಕೈಗಾರಿಕೆಗಳ ಕಾರಣದಿಂದ ಇಂದು ಗುಡಿ ಕೈಗಾರಿಕೆಗಳನ್ನು ಮರೆಯುವಂತಾಗಿದೆ. ಗುಡಿ ಕೈಗಾರಿಕೆಗಳ ಬೆಳವಣಿಗೆ ಮುಖ್ಯವಾಗಿದೆ’ ಎಂದು ಹೇಳಿದರು.

ಭಾರತಿ ಸ್ತ್ರೀ ಸಮಾಜದ ಅಧ್ಯಕ್ಷೆ ಗಿರಿಜಾ ವಿರೂಪಾಕ್ಷ, ಕ್ಲೀನ್‌ ಸಿಟಿ ಅಧ್ಯಕ್ಷೆ ಜ್ಯೋತಿ ಸುಧೀಂದ್ರ,  ಶ್ವೇತಾ ಇದ್ದರು.

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !