ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್‌ನಿಂದ ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳ ಉಚಿತ ವಿತರಣೆ

Last Updated 23 ಜುಲೈ 2020, 8:03 IST
ಅಕ್ಷರ ಗಾತ್ರ

ತಿಪಟೂರು: ಕೊರೊನಾದಿಂದ ಭಯಭೀತರಾಗಿದ್ದ ಜನರಿಗೆ ಆಯುಷ್ ಇಲಾಖೆಯಿಂದ ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದು, ಸಾವಿರಾರು ಮಂದಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಸಂಶಮನಿ ವಟಿ: ಒಂದು ಬಗೆಯ ಮಾತ್ರೆಯಾಗಿದ್ದು, ಇದರಿಂದ ಜ್ವರ, ತಲೆನೋವು, ಗಂಟಲು ನೋವು ಬಾರದಂತೆ ತಡೆಗಟ್ಟಲಿದೆ. ಬೆಳಿಗ್ಗೆ ಉಪಾಹಾರದ ನಂತರ ಮತ್ತು ರಾತ್ರಿ ಊಟದ ನಂತರ ತೆಗೆದುಕೊಳ್ಳಬೇಕು.

ಆರಕ್ ಅಜಿಬ್: ದ್ರವರೂಪದ ಔಷಧಿಯಾಗಿದ್ದು, ಇದನ್ನು ಬಿಸಿನೀರಿನಲ್ಲಿ ಹಾಕಿಕೊಂಡು ಹಬೆ ತೆಗೆದುಕೊಳ್ಳುವುದರಿಂದ ಮೂಗಿನ ಮೂಲಕ ವೈರಾಣುಗಳು ದೇಹವನ್ನು ಪ್ರವೇಶಿಸುವುದನ್ನು ತಡೆಗಟ್ಟುತ್ತದೆ. ಜೊತೆಗೆ ಮಾಸ್ಕ್‌ನಲ್ಲಿ ಒಂದು ಹನಿ ದ್ರಾವಣವನ್ನು ಹಾಕಿಕೊಂಡು ಸಹ ಬಳಕೆ ಮಾಡಬಹುದಾಗಿದೆ.

ಆಯುಷ್ ಕ್ವಾಥ (ಚೂರ್ಣ): ಔಷಧಿಯ ಗುಣ ಹೊಂದಿರುವ ಪುಡಿಯಾಗಿದ್ದು, ಇದನ್ನು ನೀರಿನಲ್ಲಿ ಹಾಕಿಕೊಂಡು ಕುದಿಸಿ ಕಾಫಿ, ಟೀ ಮಾದರಿಯಲ್ಲಿ ಕುಡಿಯಬಹುದು. ಇದು ದೇಹದಲ್ಲಿನ ರೋಗನಿರೋಧಕ ಶಕ್ತಿ ವೃದ್ಧಿಸಲು ಅನುಕೂಲವಾಗಿದೆ.

ಈ ಔಷಧಿಗಳನ್ನು ರಾಜ್ಯದ ಎಲ್ಲಾ ಆಯುಷ್ ಆಸ್ಪತ್ರೆಗಳಲ್ಲಿಯೂ ನೀಡಲಾಗುತ್ತದೆ. ಈ ಮಾಹಿತಿ ತಿಳಿದ ತಕ್ಷಣವೇ ಜನರು ಔಷಧಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT