ಭಾನುವಾರ, ಜೂಲೈ 5, 2020
26 °C
ಪಾವಗಡ: ಮೀಸಲಾತಿ ಮುಂದುವರಿಸಲು ಆಗ್ರಹ– ಮುಖ್ಯಮಂತ್ರಿಗೆ ಪತ್ರ

ಲಂಬಾಣಿಗರಿಂದ ಪತ್ರ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾವಗಡ: ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯ ಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಬುಧವಾರ ಪಟ್ಟಣದಲ್ಲಿ ಗೋರ್ ಸೀಕವಾಡಿ ಸಾಮಾಜಿಕ ಚಳವಳಿ, ಗೋರ್ ಸೇನಾ ಪದಾಧಿಕಾರಿ ಗಳು ಪತ್ರ ಚಳವಳಿ ಆರಂಭಿಸಿದರು.

ಗೋರ್ ಸೀಕವಾಡಿ ಸಾಮಾಜಿಕ ಚಳವಳಿ ಜಿಲ್ಲಾ ಘಟಕದ ಸಂಯೋಜಕ ಚನ್ನಕೇಶವ ಪವಾರ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಯಿಂದ ಬಂಜಾರ (ಲಂಬಾಣಿ), ಭೋವಿ, ಕೊರಮ, ಕೊರಚ ಜಾತಿಗಳನ್ನು ತೆಗೆಯಬೇಕೆಂದು ಕೆಲ ಕಿಡಿಗೇಡಿಗಳು ಒತ್ತಾಯಿಸುತ್ತಿದ್ದಾರೆ. ಈ ಜಾತಿಗಳ ಮೀಸಲಾತಿ ಭಿಕ್ಷೆಯಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮುದಾಯಗಳಿಗೆ ಮೂಲ ಸಂವಿಧಾನದಲ್ಲಿ ನೀಡಿರುವ ಸಂವಿಧಾನಬದ್ಧ ಹಕ್ಕು ಎಂದು ಮುಖ್ಯಮಂತ್ರಿಗೆ ಪತ್ರ ಚಳವಳಿ ನಡೆಸಲಾಗುವುದು ಎಂದರು.

ಜೂನ್ 10ರಂದು ತಾಲ್ಲೂಕಿನ ಪ್ರತಿ ತಾಂಡಾದಿಂದ 500 ಪತ್ರಗಳನ್ನು ಮುಖ್ಯಮಂತ್ರಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಸಮುದಾಯಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಮಂದು ವರೆಸಿ ಸಮಾಜದ ಸ್ವಾಸ್ಥ್ಯ ಹದಗೆಡಿಸು ತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಲಾಗುವುದು ಎಂದರು.

ಗೋರ್ ಸೇನಾ ಗೌರವಾಧ್ಯಕ್ಷ ಗೋವಿಂದ ನಾಯ್ಕ, ಅರುಣ್ ಕುಮಾರ್ ನಾಯ್ಕ, ಸತೀಶನಾಯ್ಕ, ನಂದೀಶನಾಯ್ಕ, ಜಗದೀಶ ನಾಯ್ಕ, ಜಯಕುಮಾರ್ ನಾಯ್ಕ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.