ಬೆಂಗಳೂರು: ನಗರದ ಹೃದಯಭಾಗದಲ್ಲಿ ರುವ ಬೆಂಗಳೂರು ಟರ್ಫ್ ಕ್ಲಬ್ 70 ಕಿ.ಮೀ ದೂರದ ಕುಣಿಗಲ್ಗೆ ಸ್ಥಳಾಂತರಗೊಳ್ಳಲಿದೆ.ಹೊಸ ಜಾಗದಲ್ಲಿ ರೇಸ್ ಟ್ರ್ಯಾಕ್ ವಿನ್ಯಾಸಗೊಳಿಸಲು ಇಂಗ್ಲೆಂಡ್ ದೇಶದ ವಿಶ್ವಪ್ರಸಿದ್ಧ ‘ಜಾಕಿ ಕ್ಲಬ್’ ಒಲವು ತೋರಿದೆ.

ಬುಧವಾರ ಸುದ್ದಿಗಾರರೊಂದಿಗೆಮಾತನಾಡಿದ ಬಿಟಿಸಿ ಅಧ್ಯಕ್ಷ ಎಲ್. ಶಿವಶಂಕರ್, ‘ರಾಜ್ಯ ಸರ್ಕಾರವು ಒಟ್ಟು 118 ಎಕರೆ ಜಮೀನನ್ನು ಬಿಟಿಸಿಗೆ ನೀಡಲಿದೆ. ಮುಂದಿನ ಎರಡು ವರ್ಷಗಳಲ್ಲಿ ಕ್ಲಬ್ ಸ್ಥಳಾಂತರಕ್ಕೆ ಸಿದ್ಧತೆಗಳು ನಡೆದಿವೆ. ಕುಣಿಗಲ್ನಲ್ಲಿ ಹೆಚ್ಚುವರಿಯಾಗಿ ನಾಲ್ಕು ಎಕರೆ ಜಮೀನು ನೀಡುವಂತೆಯೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಬಿಟಿಸಿ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪನ ಸಮಿತಿ ಸದಸ್ಯ ಉದಯ್ ಕೆ. ಈಶ್ವರನ್, ‘ಇಂಗ್ಲೆಂಡ್ನ ಜಾಕಿ ಕ್ಲಬ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಇನ್ನುಳಿದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇವೆ. ಅವರು ಉಚಿತವಾಗಿ ಟ್ರ್ಯಾಕ್ ಪ್ರೊ ಬೊನೊ ವಿನ್ಯಾಸಗೊಳಿಸಿಕೊಡುವುದಾಗಿ ಹೇಳಿದ್ದಾರೆ’ ಎಂದರು.

‘ಕುಣಿಗಲ್ನಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಕುದುರೆ ತಳಿ ಅಭಿವೃದ್ಧಿ ಆರಂಭಿಸಲಾಯಿತು. ಈ ಊರಿನಲ್ಲಿ ಕುದುರೆಗಳ ತಳಿ ಸಂವರ್ಧನೆ, ತರಬೇತಿ ಮತ್ತು ಓಟಕ್ಕೆ ಪೂರಕವಾದ ಮಣ್ಣಿನ ರಚನೆ ಇದೆ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ಸ್ಟೀವರ್ಡ್ ಶಂಕರ್ ಬಾಲು, ‘ನೂತನ ಕಟ್ಟಡದ ಅಂದಾಜು ವೆಚ್ಚ ₹350-500 ಕೋಟಿ ಆಗಬಹುದು. ಅಲ್ಲಿ ಸಣ್ಣ ಗ್ರ್ಯಾಂಡ್ಸ್ಟ್ಯಾಂಡ್ ನಿರ್ಮಿಸಬಹುದು. ಆದ್ದರಿಂದ ನಾವು ನೋಡುತ್ತಿರುವ ಈ ಆರಂಭಿಕ ಅಂದಾಜುಗಳು ಆರಂಭದಲ್ಲಿ ಗಮನಾರ್ಹವಾಗಿ ಕಡಿಮೆಯಿರುತ್ತವೆ. ಹಂತಹಂತವಾಗಿ ಸೌಲಭ್ಯಗಳನ್ನು ವಿಸ್ತರಿಸುತ್ತ ಹೋಗಬಹುದಾಗಿದೆ’ ಎಂದರು.

ನಾಳೆಯಿಂದ ಬೇಸಿಗೆ ರೇಸ್

ಬೆಂಗಳೂರು: ಗ್ಲಾಂಡರ್ಸ್ ಸಾಂಕ್ರಾಮಿಕ ರೋಗದ ಭಯ ದೂರವಾಗಿದ್ದು, ಬೆಂಗಳೂರು ರೇಸ್ ಕ್ಲಬ್ನಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರುತ್ತಿವೆ. ಶುಕ್ರವಾರ (ಮೇ 1)ದಿಂದ ಬೇಸಿಗೆ ರೇಸ್ ಗಳು ಆರಂಭವಾಗಲಿದೆ. ಪ್ರಸಕ್ತ ಋತುವಿನಲ್ಲಿ ಒಟ್ಟು 28 ರೇಸ್ ದಿನಗಳನ್ನು ಏರ್ಪಡಿಸಲಾಗಿದೆ. ಕೊನೆಯ ರೇಸ್ ದಿನ
ಜುಲೈ 31ರಂದು ಮುಕ್ತಾಯಗೊಳ್ಳಲಿದೆ ಎಂದು ಬಿಟಿಸಿ ಅಧ್ಯಕ್ಷ ಎಲ್.ಶಿವಶಂಕರ್ ಹೇಳಿದರು.

‘ಝವಾರೆ ಎಸ್. ಪೂನಾವಾಲ ಅವರ ಪ್ರಾಯೋಜಕತ್ವದ ಮತ್ತು ಬಿಟಿಸಿ ಕೊಡುಗೆ ಸೇರಿದಂತೆ ಡರ್ಬಿ ರೇಸ್ ಬಹುಮಾನದ ಮೊತ್ತ ₹5 ಕೋಟಿ ಇರಲಿದೆ. ಇದು ದೇಶದ ಡರ್ಬಿ ರೇಸ್ನಲ್ಲಿ ದಾಖಲೆಯ ಬಹುಮಾನದ ಮೊತ್ತವಾಗಿದೆ. ಝವಾರೆ ಎಸ್ ಪೂನಾವಾಲ ಈ ಬೇಸಿಗೆ ರೇಸ್ ಮಾತ್ರವಲ್ಲದೆ ಮುಂದಿನ ಮೂರು ವರ್ಷಗಳ ಎಲ್ಲಾ ರೇಸ್ ಋತುವಿಗೆ ಪ್ರಾಯೋಜಕತ್ವ ನೀಡಲು ಸಿದ್ಧವಾಗಿದೆ’ ಎಂದು ಶಿವಶಂಕರ್ ತಿಳಿಸಿದರು.

ಬೇಸಿಗೆ ಋತುವಿನ ಟ್ರೋಫಿಗಳು ಸೇರಿದಂತೆ ಒಟ್ಟು ಬಹುಮಾನದ ಮೊತ್ತವು ಸುಮಾರು ₹21.53 ಕೋಟಿ ಎಂದು ಅಂದಾಜಿಸಲಾಗಿದೆ. ಸುಮಾರು 634 ಕುದುರೆಗಳು ಈ ಬೇಸಿಗೆ ಋತುವಿನಲ್ಲಿ ಸ್ಫರ್ಧಿಸಲಿವೆ. ಡರ್ಬಿ ರೇಸ್ ಜುಲೈ 12ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.