ಬುಧವಾರ, ಜೂನ್ 23, 2021
21 °C

ಭಗೀರಥ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ಉಪ್ಪಾರ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸರ್ಕಾರ ಈ ಸಮುದಾಯಕ್ಕೆ ಹೆಚ್ಚು ರಾಜಕೀಯ ಪ್ರಾಧಾನ್ಯ ನೀಡಬೇಕು ಎಂದು ದೊಡ್ಡಮಾಲೂರು ಗ್ರಾಮ ಪಂಚಾಯಿತಿ ಸದಸ್ಯ ಅಶ್ವತ್ಥನಾರಾಯಣ ಒತ್ತಾಯಿಸಿದರು.

ದೊಡ್ಡಮಾಲೂರು ಗ್ರಾಮ ಪಂಚಾಯಿತಿಯ ಸೂರನಾಗೇನಹಳ್ಳಿಯಲ್ಲಿ ಬುಧವಾರ ಉಪ್ಪಾರ ಸಮುದಾಯದವರು ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕು. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಯಾವುದೇ ಸರ್ಕಾರ ಬಂದರೂ ಮೊದಲಿನಿಂದಲೂ ಉಪ್ಪಾರ ಸಮುದಾಯವನ್ನು ಕಡೆಗಣಿಸುತ್ತ ಬಂದಿವೆ. ಆದ್ದರಿಂದ ಯಾವುದೇ ಪಕ್ಷವಾದರೂ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದರು.

ಮುಖಂಡ ಹನುಮಂತ, ವೆಂಕಟೇಶ್, ಅಶ್ವತ್ಥಪ್ಪ, ಸಿದ್ದಪ್ಪ, ಲಕ್ಷ್ಮಿನಾರಾಯಣ, ನರಸಿಂಹಮೂರ್ತಿ, ಸಣ್ಣಪ್ಪ, ಸುರೇಶ್, ಎಸ್.ಜಿ. ನರಸಿಂಹಮೂರ್ತಿ, ಶರತ್ ಬಾಬು, ಆನಂದ, ನರಸಿಂಹಪ್ಪ, ರವಿಕುಮಾರ್, ಲಕ್ಷ್ಮಿಪತಿ, ಲಕ್ಕಿ, ರವಿಚಂದ್ರ, ಮಂಜುನಾಥ್, ಸುಧಾಕರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.