ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮನ ಅಮಾವಾಸ್ಯೆ ಆಚರಣೆ

Last Updated 21 ಜುಲೈ 2020, 4:31 IST
ಅಕ್ಷರ ಗಾತ್ರ

ತಿಪಟೂರು: ಮನೆ- ಮನೆಗಳಲ್ಲಿ ಮಹಿಳೆಯರು ಭೀಮನ ಅಮಾವಾಸ್ಯೆ ಅಂಗವಾಗಿ ಜ್ಯೋತಿರ್ಭೀಮೇಶ್ವರ ವ್ರತ (ಸತಿ ಸಂಜೀವಿನಿ ವ್ರತ) ಕೈಗೊಂಡು ಪತಿಯ ಪಾದಪೂಜೆ ಮಾಡುವ ಮೂಲಕ ಆಚರಣೆ ಮಾಡಿದರು.

ಅವಿವಾಹಿತರು, ವಿವಾಹಿತ ವಧು- ವರರು ವ್ರತವನ್ನು ಆಚರಿಸಿದರು. ಕೈಗೆ ಕಂಕಣ ಕಟ್ಟಿಕೊಂಡು ಜ್ಯೋತಿರ್ಭೀಮೇಶ್ವರನನ್ನು ಧ್ಯಾನಿಸಿ ವ್ರತ ಕೈಗೊಳ್ಳುತ್ತಾರೆ. ಒಮ್ಮೆ ವ್ರತ ಪ್ರಾರಂಭಿಸಿದರೆ ಐದು, ಒಂಭತ್ತು ಮತ್ತು ಹದಿನಾರು ವರ್ಷಗಳ ಕಾಲ ವ್ರತ ಕೈಗೊಳ್ಳಬೇಕಾಗುತ್ತದೆ. ನಗರದ ವಿನಾಯಕ ನಗರದ ನೂತನ ವಧು- ವರರಾದ ಶ್ರೀದೇವಿ, ಮಧುಸೂಧನ್ ದಂಪತಿ ಈ ವ್ರತ ಆಚರಣೆ ಮಾಡಿದರು.

ಜತೆಗೆ ನಾಗರ ಅಮಾವಾಸ್ಯೆ ಇರುವುದರಿಂದ ನಾಗರ ಹುತ್ತಗಳಿಗೆ, ನಾಗರ ಕಲ್ಲುಗಳ ಪ್ರತಿಷ್ಠಾಪನೆಯ ಸ್ಥಳಗಳಲ್ಲಿ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT