ಬಿಹಾರದಲ್ಲಿ ಮಕ್ಕಳ ಸಾವು: ಪ್ರತಿಭಟನೆ

ಮಂಗಳವಾರ, ಜೂಲೈ 16, 2019
23 °C

ಬಿಹಾರದಲ್ಲಿ ಮಕ್ಕಳ ಸಾವು: ಪ್ರತಿಭಟನೆ

Published:
Updated:
Prajavani

ತುಮಕೂರು: ಮೆದುಳು ಜ್ವರದಿಂದ ನೂರಾರು ಬಡ ಮಕ್ಕಳು ಸಾವನ್ನಪ್ಪಿದ್ದು ಈ ಘಟನೆಯನ್ನು ನಿಭಾಯಿಸಲು ಬಿಹಾರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ, ಕಮ್ಯುನಿಸ್ಟ್ ) ಪಕ್ಷದ ಕಾರ್ಯಕರ್ತರು ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಮೃತ ಮಕ್ಕಳು ಬಡವರು, ಕೂಲಿಕಾರ್ಮಿಕರ ಮಕ್ಕಳಾಗಿದ್ದಾರೆ. ಈ ಕುಟುಂಬಗಳಿಗೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಂಜುಳಾ, ರತ್ನಮ್ಮ, ಅಶ್ವಿನಿ, ಸಾಗರ್, ಅಕ್ಷರ, ಕಲ್ಯಾಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !