ಮೃತರು ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಸಮೀಪದ ನೆಟ್ಟಿಕೆರೆ ಗ್ರಾಮದ ನಿವಾಸಿ. ಕೂಲಿ ಕೆಲಸ ಮಾಡಿಕೊಂಡಿದ್ದರು. ಹೆಬ್ಬೂರು ಕಡೆಯಿಂದ ನೆಟ್ಟಿಕೆರೆಗೆ ಹೋಗುವಾಗ ಸಿ.ಎಸ್.ಪುರ ಕಡೆಯಿಂದ ಹೆಬ್ಬೂರಿನತ್ತ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಬೈಕ್‌ನಲ್ಲಿದ್ದ ಚಿತ್ತಯ್ಯ (34) ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.