ತುಮಕೂರು: ತಾಲ್ಲೂಕಿನ ವಿವಿಧೆಡೆ ಎಚ್5ಎನ್1 (ಹಕ್ಕಿಜ್ವರ) ವೈರಾಣು ಸೋಂಕಿನಿಂದ ನವಿಲುಗಳು ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.

ಏಪ್ರಿಲ್ 16ರಿಂದ 21ರವರೆಗೆ ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಬೊಮ್ಮನಹಳ್ಳಿ, ಕೋಳಿಹಳ್ಳಿ ಹಾಗೂ ಗೂಳೂರು ಹೋಬಳಿ ಬೈರಸಂದ್ರ, ಹುಲ್ಲೇನಹಳ್ಳಿ ಗ್ರಾಮದ ಸುತ್ತಮುತ್ತ 44 ನವಿಲುಗಳು ಮೃತಪಟ್ಟಿದ್ದವು.

ನವಿಲುಗಳ ಮೃತ ದೇಹದ ಮಾದರಿಯನ್ನು ಪರೀಕ್ಷೆಗಾಗಿ ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಪ್ರಯೋಗಾಲಯದ ವರದಿ ಬಂದಿದ್ದು, ಹಕ್ಕಿಜ್ವರ ಸೋಂಕಿನಿಂದ ನವಿಲುಗಳು ಮೃತಪಟ್ಟಿರುವುದು ಖಚಿತವಾಗಿದೆ.

ಎರಡು ಹೋಬಳಿ ವ್ಯಾಪ್ತಿಯಲ್ಲಿ 31 ಕೋಳಿ ಅಂಗಡಿ, 10 ಕೋಳಿ ಫಾರಂಗಳಿವೆ. ನವಿಲುಗಳು ಮೃತಪಟ್ಟ ಪ್ರದೇಶದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಈ ಭಾಗದ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಿ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೋಳಿ ಸಾಕಾಣಿಕೆದಾರರಿಗೆ ಜಿಲ್ಲಾ ಆಡಳಿತ ನಿರ್ದೇಶಿಸಿದೆ.

10 ದಿನಗಳಿಂದ ನವಿಲು ಸಾವು ಸಂಭವಿಸಿಲ್ಲ. ತಜ್ಞ ವೈದ್ಯರು ಜಿಲ್ಲಾ ಆಡಳಿತದ ಜತೆಗೆ ಚರ್ಚಿಸಿ, ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

30 ಕೋಳಿ ಸಾವು

ನವಿಲುಗಳು ಮೃತಪಟ್ಟಿದ್ದ ಬೊಮ್ಮನಹಳ್ಳಿ ಬಳಿ ಕೋಳಿ ಫಾರಂನಲ್ಲಿ ಶುಕ್ರವಾರ 30 ಕೋಳಿಗಳು ಮೃತಪಟ್ಟಿವೆ. ಇದು ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ. ಕೋಳಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೋಗ ಹರಡುವಿಕೆ ತಡೆಯುವ ಉದ್ದೇಶದಿಂದ ಜಿಲ್ಲಾ ಆಡಳಿತ ತ್ವರಿತ ಸ್ಪಂದನಾ ತಂಡ (ಆರ್ಟಿಆರ್) ರಚಿಸಿದೆ. ಕೋಳಿ ಫಾರಂಗಳಿಗೆ ಸೋಡಿಯಂ ಕ್ಲೋರೈಡ್ ಸಿಂಪಡಣೆ ಮಾಡಲಾಗಿದೆ.

‘ಪ್ರಯೋಗಾಲಯದ ವರದಿ ಬಂದ ನಂತರ ಕೋಳಿ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಫಾರಂ ಮಾಲೀಕರು ನೆರೆಹೊರೆಯವರೂ ಎಲ್ಲಿಗೂ ಹೋಗದಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.