ಮಂಗಳವಾರ, ನವೆಂಬರ್ 19, 2019
29 °C

ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತೆ: ಜೆಡಿಎಸ್ ಶಾಸಕ ಶ್ರೀನಿವಾಸ್

Published:
Updated:

ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್‌ ಶಾಸಕ ಎಸ್.ಆರ್.ಶ್ರೀನಿವಾಸ್ ಬಿಜೆಪಿ ಪಕ್ಷವನ್ನು ಶುಕ್ರವಾರ ಹಾಡಿ ಹೊಗಳಿದ್ದಾರೆ.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನೂರಕ್ಕೆ ನೂರರಷ್ಟು ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ. ನಮ್ಮ ಪಕ್ಷದ ರೀತಿ ಬಿಜೆಪಿಯಲ್ಲಿ ಅತೃಪ್ತರು, ಕಿತ್ತಾಡೋರು ಇಲ್ಲ. ರಾಜೀನಾಮೆ ಕೊಡುವುದೂ ನಡೆಯಲ್ಲ. ಬಿಜೆಪಿಯವರಿಗೆ ಅವರದ್ದೇ ಆದ ಸಿದ್ಧಾಂತವಿದೆ. ಶಿಸ್ತು ಇದ್ದು, ಹೈಕಮಾಂಡ್ ಬಿಗಿಯಾಗಿದೆ’ ಎಂದರು.

ಸಿ.ಟಿ.ರವಿ, ಉಮೇಶ್ ಕತ್ತಿ, ಆರ್. ಅಶೋಕ್ ಅವರು ಬಾಲ ಮುದುಡಿಕೊಂಡು ಸುಮ್ಮನಾಗಿಲ್ಲವೇ. ಹಾಗಾಗಿ ಬಿಜೆಪಿ ಸರ್ಕಾರಕ್ಕೆ ಏನೂ ಆಗಲ್ಲ ಎಂದು ಹೇಳಿದರು.

'ದೇವೇಗೌಡರು ಪಕ್ಷ ಕಟ್ಟುವ ಕೆಲಸ ನಿರಂತರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಬಗ್ಗೆ ನಾನೇನೂ ಹೇಳಲ್ಲ. ನಾನು ಏಳು ಜನರೊಂದಿಗೆ ಬಿಜೆಪಿಗೆ ಹೋಗುತ್ತೇನೆ ಎಂಬುದು ಸುಳ್ಳು ಸುದ್ದಿ. ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ' ಎಂದು ತಿಳಿಸಿದರು.

ಪಕ್ಷದಿಂದ ನೋವಾಗಿದೆ. ಆ ಬಗ್ಗೆ ಮುಂದೆ ಎಲ್ಲವನ್ನು ಹೇಳುತ್ತೇನೆ ಎಂದರು. 

ಪ್ರತಿಕ್ರಿಯಿಸಿ (+)