ಮನಸೂರೆಗೊಂಡ ‘ವಾಲಿಮೋಕ್ಷ’

ಭಾನುವಾರ, ಏಪ್ರಿಲ್ 21, 2019
25 °C

ಮನಸೂರೆಗೊಂಡ ‘ವಾಲಿಮೋಕ್ಷ’

Published:
Updated:
Prajavani

ತುಮಕೂರು: ಹನುಮಂತಪುರದ ಬಯಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮನವಮಿಯ ಪ್ರಯುಕ್ತ ಯಕ್ಷದೀವಿಗೆ ತಂಡದ ಕಲಾವಿದರು ‘ವಾಲಿಮೋಕ್ಷ’ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದರು.

ರಾಮಲಕ್ಷ್ಮಣರೊಂದಿಗೆ ಆಂಜನೇಯನ ಮೊದಲ ಭೇಟಿ, ಸುಗ್ರೀವ ಸಖ್ಯ, ವಾಲಿ-ಸುಗ್ರೀವರ ಕಾಳಗ, ವಾಲಿಯ ಸಂಹಾರ ಸನ್ನಿವೇಶಗಳನ್ನು ಒಳಗೊಂಡ ರಾಮಾಯಣದ ಪ್ರಸಂಗವು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಅರ್ಜುನ್ ರಾವ್ ಕೋರ್ಡೇಲು, ಚೆಂಡೆವಾದಕರಾಗಿ ವೇಣು ಪಡ್ರೆ, ಮದ್ದಳೆವಾದಕರಾಗಿ ಶ್ರೀಶ ರಾವ್ ನಿಡ್ಲೆ, ಚಕ್ರತಾಳವಾದಕರಾಗಿ ಅಭಿಲಾಷ್ ಉಡುಪ ಸಹಕರಿಸಿದರು.

ಮುಮ್ಮೇಳದಲ್ಲಿ ಕಲಾವಿದರಾಗಿ ಶಶಾಂಕ ಅರ್ನಾಡಿ (ಸುಗ್ರೀವ), ಆರತಿ ಪಟ್ರಮೆ (ವಾಲಿ), ಪೃಥ್ವಿಚಂದ್ರ (ಹನುಮಂತ), ಕೆ.ವಿ.ಸಿಬಂತಿ ಪದ್ಮನಾಭ (ರಾಮ), ಕೆ.ಎನ್.ಭಾನುಪ್ರಸಾದ (ಲಕ್ಷ್ಮಣ), ಮನೋಜ್ ಭಟ್ (ತಾರೆ), ಟಿ.ಎಸ್‌.ಪ್ರಭಾಸ್ ಪಂಡಿತ್ (ಬಾಲ ವಟು) ಅಭಿನಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !