ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬಿಪಿಎಲ್‌ ಕಾರ್ಡ್‌ ಇದ್ದರೂ ಪಡಿತರವಿಲ್ಲ

Last Updated 2 ಮೇ 2020, 17:37 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ‘ಪಡಿತರ ಚೀಟಿ ಹೊಂದಿದ್ದರೂ ಹೆಬ್ಬೆಟ್ಟಿನ ಅಚ್ಚು ಬೀಳದ ಕಾರಣ ಒಂದು ವರ್ಷದಿಂದ ಪಡಿತರ ದೊರೆತಿಲ್ಲ’ ಎಂದು ಮಧುಗಿರಿ ತಾಲ್ಲೂಕಿನ ಪುರವರ ಗ್ರಾಮದ ಕತ್ತಾಳಿ ಹನುಮಯ್ಯ (80) ಆರೋಪಿಸಿದ್ದಾರೆ.

ನನ್ನ ಬಳಿ ಬಿಪಿಎಲ್‌ ಪಡಿತರ ಚೀಟಿ ಇದೆ. ಆದರೆ ಪುರವರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದವರು ನಿಮಗೆ ವಯಸ್ಸಾಗಿರುವುದರಿಂದ ಆಹಾರ ಸಾಮಗ್ರಿ ಕೊಡಲು ಸಾಧ್ಯವಾಗುವುದಿಲ್ಲ ಎಂದು ವಾಪಸ್ ಕಳುಹಿಸುತ್ತಾರೆ. ಈ ಸಮಸ್ಯೆ ಸರಿಪಡಿಸಲು ಮಧುಗಿರಿ ಆಹಾರ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪಡಿತರ ದೊರೆತಿಲ್ಲ. ಇದರಿಂದ ನನಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.

ಇಂತಹ ವಯಸ್ಸಾದ ಮತ್ತು ಬೆರಳಚ್ಚು ಮೂಡದಿರುವ ಸುಮಾರು 15 ಕುಟುಂಬಗಳ ಪಡಿತರ ಚೀಟಿಗಳಿಗೆ ಇದೇ ರೀತಿಯ ಸಮಸ್ಯೆಯಿದೆ. ಹೆಬ್ಬೆಟ್ಟು ಮೂಡದಿದ್ದರೂ ಅಂತಹ ಕುಟುಂಬಗಳಿಗೆ ಪಡಿತರ ನೀಡಬೇಕೆಂದು ಸರ್ಕಾರ ಸೂಚಿಸಿದ್ದರೂ, ಪುರವರ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದವರು ಆಹಾರ ಸಾಮಗ್ರಿ ನೀಡದೆ ವೃದ್ಧರನ್ನು ಹಿಂಸಿಸುತ್ತಿದ್ದಾರೆ ಎಂದು ಪುರವರ ಗ್ರಾಮದ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ರಂಗಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT