ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ವೀರಭದ್ರಸ್ವಾಮಿ ರಥೋತ್ಸವ

Last Updated 16 ಏಪ್ರಿಲ್ 2019, 14:06 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹರಳೂರು ಗ್ರಾಮದ ವೀರಭದ್ರಸ್ವಾಮಿ ರಥೋತ್ಸವವು ಏ.25ರಂದು ಮಧ್ಯಾಹ್ನ 1 ಗಂಟೆಗೆ ಜರುಗಲಿದೆ.

ರಥೋತ್ಸವದ ಅಂಗವಾಗಿ ಏ.23 ರಿಂದ 29ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. 23 ರಂದು ನಂದಿವಾಹನ ಮುತ್ತಿನ ಪಾಲಕಿ ಉತ್ಸವ, ಅಗ್ನಿಕೊಂಡ, 24ರಂದು ರಾವಣೋತ್ಸವ, ನಂದಿವಾಹನ, ಗಜವಾಹನ, 26ರಂದು ನಂದಿವಾಹನ, 27ರಂದು ರಾತ್ರಿ 10ಕ್ಕೆ ಅಕ್ಕಿಪೂಜಾ ಅಲಂಕಾರ, ಮುತ್ತಿನ ಪಾಲಕಿ ಉತ್ಸವ, 28ರಂದು ತಿರುಗಣಿ ಉತ್ಸವ ಹಾಗೂ 29ರಂದು ಓಕುಳಿ ಮೆರವಣಿಗೆ ಜರುಗಲಿವೆ.

ಏ.21 ಹಾಗೂ 22ರಂದು ದೇವಾಲಯದ ವಿಮಾನ ಗೋಪುರ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿಷ್ಠಾಪನೆ ಪ್ರಯುಕ್ತ ಗಂಗಾಪೂಜೆ, ರುದ್ರಹೋಮ, ಕುಂಭಾಭಿಷೇಕ, ಬಿಲ್ವಾರ್ಚನೆ, ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. 22ರ ಬೆಳಿಗ್ಗೆ 9.30 ಗಂಟೆಗೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಪಾದ ಪೂಜೆ, ಶಿವಕುಮಾರ ಸ್ವಾಮೀಜಿ ಪಂಚಲೋಹ ಉತ್ಸವ ಮೂರ್ತಿಯ ಪ್ರಥಮ ವರ್ಷದ ಮೆರವಣಿಗೆ ನಡೆಯಲಿದೆ ಎಂದು ವೀರಭದ್ರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಶಂಕರಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT