ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸುಗೊಂಡ ರಾಗಿ ಖರೀದಿ

Last Updated 11 ಮೇ 2020, 17:12 IST
ಅಕ್ಷರ ಗಾತ್ರ

ಕುಣಿಗಲ್: ಸ್ಥಗಿತಗೊಂಡಿದ್ದ ರಾಗಿ ಖರೀದಿ ಕೇಂದ್ರದ ಚಟುವಟಿಕೆ ಪ್ರಾರಂಭವಾಗಿದೆ. ನಿತ್ಯ 1,500 ಕ್ವಿಂಟಲ್ ರಾಗಿ ರೈತರಿಂದ ಖರೀದಿ
ಯಾಗುತ್ತಿದೆ.

ತಾಲ್ಲೂಕಿನಲ್ಲಿ 4,456 ರೈತರು ನೋಂದಣಿಯಾಗಿದ್ದಾರೆ. ಮಾರ್ಚ್‌ ನಿಂದ ಪ್ರಾರಂಭವಾದ ರಾಗಿ ಖರೀದಿಯ ಪ್ರಕ್ರಿಯೆಯಲ್ಲಿ ಮಾರ್ಚ್ 25ರವರೆಗೆ 53,630 ಕ್ವಿಂಟಲ್ ರಾಗಿ ಖರೀದಿಮಾಡಲಾಗಿತ್ತು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಾರ್ಚ್ 26ರಿಂದ ಖರೀದಿಯನ್ನು ಸ್ಥಗಿತಗೊಳಿಸಲಾಗಿತ್ತು.

ಐದು ದಿನಗಳಿಂದ 500 ರೈತರಿಂದ 7,500 ಕ್ವಿಂಟಲ್ ಖರೀದಿಮಾಡಲಾಗಿದೆ ಎಂದು ತಿಳಿಸಿದ ವ್ಯವಸ್ಥಾಪಕ ಮುನಿರಾಜು, ಈಗಾಗಲೇ 2,788 ರೈತರಿಗೆ ಹಣ ಪಾವತಿಯಾಗಿದೆ. ವಿವರಗಳನ್ನು ಸಮರ್ಪಕವಾಗಿ ನೀಡದ ಮತ್ತು ತಾಂತ್ರಿಕ ದೋಷಗಳಿಂದ ಕೆಲವು ರೈತರ ಹಣ ಪಾವತಿಯಾಗಿಲ್ಲ. ಮೇ 28ರವರೆಗೂ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT