ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯತ್ವ ಇಲ್ಲದವರ ಕೈಯಲ್ಲಿ ದೇಶ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನಜಾಗೃತಿ ಸಮಾವೇಶ
Last Updated 9 ಫೆಬ್ರುವರಿ 2020, 14:48 IST
ಅಕ್ಷರ ಗಾತ್ರ

ತುಮಕೂರು: ದೇಶದಲ್ಲಿ ಇಂದು ಮನುಷ್ಯತ್ವವೇ ಇಲ್ಲದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮರಳೂರು ಜನತಾ ಕಾಲೊನಿಯಲ್ಲಿ ಭಾನುವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾಯ್ದೆ, ಕಾನೂನು ಜಾರಿಗೊಳಿಸಬೇಕಾದರೆ ಸರ್ವಪಕ್ಷಗಳ ಸಭೆ ಕರೆದು ಕಾಯ್ದೆಗಳ ಸಾಧಕ–ಬಾಧಕಗಳನ್ನು ಚರ್ಚಿಸಬೇಕು. ಆದರೆ ಬಿಜೆಪಿ ಸರ್ಕಾರ ಇದಕ್ಕೆ ವಿರುದ್ಧವಾಗಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ನಾವು ಮಾಡಿದ್ದೆ ಸರಿ, ನಾವು ಹೇಳಿದ್ದೆ ನ್ಯಾಯ ಎನ್ನುವಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.

‘ದೇಶದ ವಿವಿಧೆಡೆ ಸಿಎಎ, ಎನ್‌ಆರ್‌ಸಿ ವಿರುದ್ಧ ಲಕ್ಷಾಂತರ ಹೋರಾಟಗಳು ಶಾಂತಿಯುತವಾಗಿ ನಡೆದಿವೆ. ಆದರೆ ಬಿಜೆಪಿ, ಆರ್‌ಎಸ್‌ಎಸ್‌ ನಮ್ಮ ಶಾಂತಿ ಕದಡುವುದಕ್ಕೆ ಪ್ರಯತ್ನಿಸುತ್ತಿದೆ’ ಎಂದರು.

ಗಾಂಧೀಜಿ ನಮ್ಮ ದೇಶ ರಾಮರಾಜ್ಯ ಆಗಬೇಕು ಎಂದು ಕನಸು ಕಂಡಿದ್ದರು. ಆದರೆ, ನರೇಂದ್ರ ಮೋದಿ ಈ ದೇಶವನ್ನು ಬಡತನ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಕೆಳಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಸಂವಿಧಾನಬಾಹಿರ ನಿಲುವುಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. ಮುಂದೆಯೂ ಇದೇ ರೀತಿ ಸಂವಿಧಾನ ವಿರುದ್ಧವಾದ ನಿಲುವುಗಳು ತೆಗೆದುಕೊಂಡರೆ ಕುರಂಗ ಮಾದರಿಯಲ್ಲಿ ಯುದ್ಧ ಮರುಕಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ವಕೀಲ ಅಜೀಮ್ ಷರೀಫ್, ‘ಸಿಎಎ, ಎನ್‌ಆರ್‌ಸಿಯಂತಹ ಅನೈತಿಕ ಕಾನೂನುಗಳನ್ನು ನೈತಿಕ ಸಂವಿಧಾನದೊಂದಿಗೆ ಜೋಡಿಸುವ ಕುತಂತ್ರ ನಡೆಯುತ್ತಿದೆ. ಇದರ ವಿರುದ್ಧ ನಾವು ಜಾಗೃತರಾಗಬೇಕು. ದೇಶವನ್ನು, ಸಂವಿಧಾನವನ್ನು ಉಳಿಸಬೇಕಿದೆ. ಜನವಿರೋಧಿ, ಸಂವಿಧಾನ ವಿರೋಧಿ ಕಾನೂನು, ಕಾಯ್ದೆಗಳು ನಿಲ್ಲುವವರೆಗೂ ನಮ್ಮ ಹೋರಾಟ ನಿಲ್ಲಬಾರದು’ ಎಂದು ಹೇಳದರು.

ಮೌಲಾನ ಜುಲ್ಫಕರ್ ಅಹಮದ್, ‘ನಾವಿಂದು ಅಖಂಡ ಭಾರತಕ್ಕಾಗಿ, ಸಂವಿಧಾನ ಉಳಿಸುವುದಕ್ಕಾಗಿ ಜೀವ ಇರುವರೆಗೂ ಹೋರಾಡಬೇಕಿದೆ’ ಎಂದರು.

ಮಾಜಿ ಶಾಸಕ ಶಫಿ ಅಹಮ್ಮದ್, ಪಾಲಿಕೆ ಸದಸ್ಯ ಎಚ್.ಟಿ.ಕೆ.ಮಂಜುನಾಥ್, ಮೌಲಾನಾ ಅಬ್ಬಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT