ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರ ಕೊಲ್ಲಲು ಸಾಧ್ಯವಿಲ್ಲ

ಗಾಂಧಿ ಹುತಾತ್ಮ ದಿನ: ದ್ವೇಷ ಅಳಿಯಲಿ, ಸಹಬಾಳ್ವೆ ಬೆಳೆಯಲಿ ಕಾರ್ಯಕ್ರಮದಲ್ಲಿ ಎನ್.ನಾಗಪ್ಪ ಹೇಳಿಕೆ
Last Updated 30 ಜನವರಿ 2019, 15:54 IST
ಅಕ್ಷರ ಗಾತ್ರ

ತುಮಕೂರು:ಗಾಂಧೀಜಿಯನ್ನು ಕೊಂದವರೇ ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಂದರು. ವ್ಯಕ್ತಿಯನ್ನು ದೈಹಿಕವಾಗಿ ಕೊಲ್ಲಬಹುದೇ ಹೊರತು, ಅವರು ಪ್ರತಿಪಾದಿಸಿದ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲಎಂದು ಸಾಹಿತಿ ಎನ್.ನಾಗಪ್ಪ ಅಭಿಪ್ರಾಯಪಟ್ಟರು.

ನಗರದ ಸ್ವಾತಂತ್ರ್ಯ ಚೌಕದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಮಹಾತ್ಮಗಾಂದಿ ಹುತಾತ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ದ್ವೇಷ ಅಳಿಯಲಿ, ಸಹಬಾಳ್ವೆ ಬೆಳೆಯಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಗಾಂಧೀಜಿ ಅವರನ್ನು ಗುಂಡಿಟ್ಟು ಕೊಂದ ನಾಥೂರಾಮ್‌ ಗೋಡ್ಸೆಯ ದೇವಸ್ಥಾನವನ್ನು ನಿರ್ಮಿಸಲು ಹೊರಟಿರುವುದು ಅನಾರೋಗ್ಯಕರ ಬೆಳವಣಿಗೆ. ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ವಿಚಾರಧಾರೆಯವರನ್ನು ಕೊಲ್ಲುವ ಮೂಲಕ ಸಮಾಜದಲ್ಲಿ ಭಯ ಉಂಟು ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಯುವಪೀಳಿಗೆ ಎಚ್ಚರಿಕೆಯಿಂದ ಗಮನಿಸಬೇಕು ಎಂದರು.

ಸೌರ್ಹಾದ ಕರ್ನಾಟಕದ ಸಂಚಾಲಕ ಎಸ್.ರಾಘವೇಂದ್ರ ಮಾತನಾಡಿ, ‘ಹಲವರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅವರನ್ನು ಸ್ಮರಿಸಿಕೊಳ್ಳಬೇಕಾಗಿದೆ’ ಎಂದರು.

ಕಾರ್ಮಿಕ ಮುಖಂಡ ಎನ್.ಕೆ.ಸುಬ್ರಮಣ್ಯ, ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಗೋವಿಂದರಾಜು, ಶಂಕರಪ್ಪ, ಖಲೀಲ್, ಸಿಐಟಿಯು ಅಧ್ಯಕ್ಷ ಷಣ್ಮುಖಪ್ಪ, ಲೋಕೇಶ್, ಪುಟ್ಟೇಗೌಡ, ಕೆಪಿಆರ್‌ಎಸ್ ಸಂಚಾಲಕ ಅಜ್ಜಪ್ಪ, ನಾಗರಾಜು, ರಾಮಕ್ಕ, ಕೊಳಗೇರಿ ಹಿತರಕ್ಷಣಾ ಸಮಿತಿಯ ಶೆಟ್ಟಾಳಯ್ಯ, ಡಿವೈಎಫ್‌ಐ ಮುಖಂಡ ದರ್ಶನ್ ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT