ಸೋಮವಾರ, ಆಗಸ್ಟ್ 19, 2019
21 °C

ಕಾರುಗಳ ಡಿಕ್ಕಿ: ಇಬ್ಬರ ಸಾವು

Published:
Updated:

ಕುಣಿಗಲ್: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಆಲಪ್ಪನಗುಡ್ಡೆ ಬಳಿ ಭಾನುವಾರ ರಾತ್ರಿ 10 ಗಂಟೆಗೆ ಎರಡು ಸ್ವಿಫ್ಟ್ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಮೃತಪಟ್ಟವರಲ್ಲಿ ನೆಲಮಂಗಲ ಮೂಲದ ಗುರು ಎಂಬುವವರಾಗಿದ್ದು, ಮೃತಪಟ್ಟ ಇನ್ನೊಬ್ಬರ ವಿವರ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಗಾಯಗೊಂಡ ನಾಲ್ವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದಿದೆ.

Post Comments (+)