ಕೇಂದ್ರದಿಂದ ಅಧಿಕಾರ ಕೇಂದ್ರೀಕರಣ

ಸೋಮವಾರ, ಏಪ್ರಿಲ್ 22, 2019
33 °C
ನಗರದ ದೇವರಾಜು ಅರಸು ಬಡಾವಣೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಎ.ನರಸಿಂಹಮೂರ್ತಿ ಹೇಳಿಕೆ

ಕೇಂದ್ರದಿಂದ ಅಧಿಕಾರ ಕೇಂದ್ರೀಕರಣ

Published:
Updated:
Prajavani

ತುಮಕೂರು: ಕೇಂದ್ರ ಸರ್ಕಾರವು ಹೆಚ್ಚು ಹೆಚ್ಚು ಅಧಿಕಾರ ಕೇಂದ್ರೀಕರಿಸಿಕೊಂಡು ರಾಜ್ಯಗಳಿಗೆ ಸಂವಿಧಾನ ಬದ್ಧವಾಗಿ ನೀಡಲಾಗಿರುವ ಅಧಿಕಾರ ವಿಕೇಂದ್ರಿಕರಣವನ್ನು ಕಸಿದುಕೊಳ್ಳುತ್ತಿದೆ ಎಂದು ಎಂದು ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.

ನಗರದ ದೇವರಾಜು ಅರಸು ಬಡಾವಣೆ ಮತ್ತು ಅರಳಿ ಮರ ಪಾಳ್ಯದಲ್ಲಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ವಂಚಿತ ಸಮುದಾಯಗಳ ಮತ್ತು ಸ್ಲಂ ನಿವಾಸಿಗಳ ಸನ್ನದು ಕುರಿತು ಸ್ಲಂ ನಿವಾಸಿಗಳಿಗೆ ಆಯೋಜಿಸಿದ್ದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಇಂದು ದೇಶ ಅಪಾಯದಲ್ಲಿದ್ದು ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಸಿದ ಜನರಿಗೆ ಭಾವುಕತೆಯ ಪಾಠವನ್ನು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಇದು ದೇಶದ ಜನರಿಗೆ ಮಾಡುವ ಮೋಸಕ್ಕಿಂತ ಕ್ರೌರ್ಯವಾಗಿದೆ ಎಂದು ಆರೋ‍ಪಿಸಿದರು.

ಜಾಗೃತಿಯಿಂದ ಕೊಳೆಗೇರಿ ಜನರು ರಾಜಕೀಯ ಪ್ರಜ್ಞೆ ಮೂಡಿಸಿಕೊಂಡಿದ್ದಾರೆ. ಹಾಗೇ ನಗರದ ಜನಸಂದಣಿ ಪ್ರದೇಶಗಳಲ್ಲಿ ಸಾಮಾನ್ಯ ಮತ್ತು ಮಧ್ಯಮ ವರ್ಗದವರಲ್ಲಿ ಮತ್ತಷ್ಟು ಅರಿವು ಮೂಡಿಸಲು ಬೀದಿ ಸಭೆಗಳನ್ನು ಮಾಡಿ ಸ್ಲಂ ನಿವಾಸಿಗಳ ಸನ್ನದು ಕರಪತ್ರಗಳನ್ನು ಹಂಚಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಶೆಟ್ಟಾಳಯ್ಯ, ಅರುಣ್, ಸಿದ್ದಪ್ಪ, ಶಂಕರಪ್ಪ, ಹಾಯತ್, ಪುಟ್ಟರಾಜು ಹಾಗೂ ರಂಗನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !