ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಕಾರ್ಡ್‌ ಬದಲಿಸಿ ₹ 1.36 ಲಕ್ಷ ವಂಚನೆ

Last Updated 9 ಜುಲೈ 2020, 16:15 IST
ಅಕ್ಷರ ಗಾತ್ರ

ಶಿರಾ: ನಗರದ ಎಸ್‌ಬಿಐ ಬ್ಯಾಂಕ್‌ನ ಎಟಿಎಂನಲ್ಲಿ ಸಹಾಯ ಕೇಳಿದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್‌ ಬದಲಿಸಿ‌ ₹ 1.36 ಲಕ್ಷ ವಂಚಿಸಲಾಗಿದೆ.

ಜ್ಯೋತಿನಗರದ ಮಹಿಳೆಯೊಬ್ಬರು ಜೂನ್‌ 26ರಂದು ಎಸ್‌ಬಿಐ ಬ್ಯಾಂಕ್‌ನ ಎಟಿಎಂನಲ್ಲಿ ತನ್ನ ಖಾತೆಗೆ ₹ 10 ಸಾವಿರ ಜಮಾ ಮಾಡಲು ತೆರಳಿದ್ದರು. ಸಹಾಯ ಮಾಡುವಂತೆ ಅಲ್ಲಿದ್ದ ಯುವಕನನ್ನು ಕೇಳಿದ್ದರು. ಆಗ ಖಾತೆಗೆ ಹಣ ಜಮಾ ಮಾಡಿದ ಯುವಕ, ಆಕೆಯ ಎಟಿಎಂ ಕಾರ್ಡ್‌ ಬದಲಿಸಿ ನಕಲಿ ಎಟಿಎಂ ಕಾರ್ಡ್‌ ಕೊಟ್ಟು ಹೋಗಿದ್ದಾನೆ.

ನಂತರ ಮಹಿಳೆಯ ಎಟಿಎಂ ಕಾರ್ಡ್‌ ಬಳಸಿ ₹ 1.36 ಲಕ್ಷ ಡ್ರಾ ಮಾಡಿದ್ದಾನೆ.

ಜುಲೈ 8ರಂದು ಮಹಿಳೆ ಜಮೆ ಮಾಡಿದ ಹಣವನ್ನು ಪಾಸ್‌ಬುಕ್‌ನಲ್ಲಿ ದಾಖಲಿಸಲು ಬ್ಯಾಂಕ್‌ಗೆ ತೆರಳಿದಾಗ ಖಾತೆಯಲ್ಲಿದ್ದ ಹಣ ದೋಚಿರುವುದು ತಿಳಿದಿದೆ. ಈ ಬಗ್ಗೆ ಶಿರಾ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT