ಬುಧವಾರ, ಸೆಪ್ಟೆಂಬರ್ 18, 2019
26 °C

ಚಿರತೆ ದಾಳಿ: ವ್ಯಕ್ತಿಗೆ ಗಾಯ

Published:
Updated:
Prajavani

ಕೊರಟಗೆರೆ: ಬುರುಗನಹಳ್ಳಿ ಬಳಿಯ ಜಮೀನೊಂದರ ಪೊದೆಯಲ್ಲಿ ಅಡಗಿದ್ದ ಚಿರತೆಯೊಂದು ಅಲ್ಲಿನ ನಿವಾಸಿ ರಂಗರಾಜು (40) ಎಂಬುವರು ಭಾನುವಾರ ಮಧ್ಯಾಹ್ನ ದಾಳಿನಡೆಸಿದೆ

ಚಿರತೆ ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಜಮೀನಿಗೆ ಹೋದ ವೇಳೆ ಪೊದೆಯಲ್ಲಿ ಚಿರತೆ ಅಡಗಿದೆ ಎಂದು ತೋರಿಸಲು ರಂಗರಾಜು ಹೋಗಿದ್ದಾರೆ. ಈ ವೇಳೆ ಗಾಬರಿಗೊಂಡ ಚಿರತೆ ಅವರ ಮೇಲೆ ಎರಗಿದೆ. ಇದರಿಂದಾಗಿ ರಂಗರಾಜುವಿನ ಬಲಗೈಗೆ ಪರಚಿದ ಗಾಯಗಳಾಗಿವೆ.

ಗಾಯಾಳು ರಂಗರಾಜು ಅವರನ್ನು ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ನಂತರ ಚಿರತೆ ತಪ್ಪಿಸಿಕೊಂಡಿದ್ದು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.

ಘಟನೆಯಿಂದಾಗಿ ಸುತ್ತಮುತ್ತಲ ಗ್ರಾಮದ ಜನರು ಭಯಭಿತರಾಗಿದ್ದಾರೆ. ಈ ಭಾಗದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳತ್ತಿರುವ ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Post Comments (+)