ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಕೊಳ್ಳಲು ಮುಗಿಬಿದ್ದ ಜನ

Last Updated 31 ಮಾರ್ಚ್ 2020, 17:13 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮಾರಬಾರದೆಂಬ ಸೂಚನೆ ಇದ್ದರೂ ಕೆಲ ಕೋಳಿ ಫಾರಂನವರು ಕೋಳಿಗೆ ಕಡಿಮೆ ಬೆಲೆ ನಿಗದಿಪಡಿಸಿ ಮಾರಲು ಮುಂದಾಗಿದ್ದಾರೆ. ಕಡಿಮೆ ಬೆಲೆಯ ಕೋಳಿಗಳನ್ನು ಮಂಗಳವಾರ ಜನರು ಮನಸೋ ಇಚ್ಚೆ ಕೊಂಡೊಯ್ದರು.

ಕೊಡಿಗೇನಹಳ್ಳಿ ಹೋಬಳಿಯ ಮೈದನಹೊಸಹಳ್ಳಿ ಗ್ರಾಮದ ಮೈದನಹಳ್ಳಿಗೆ ತೆರಳುವ ರಸ್ತೆ ಬದಿಯಲ್ಲಿ ನೂತನವಾಗಿ ಆರಂಭವಾಗಿರುವ ಕೋಳಿ ಫಾರಂನಲ್ಲಿ ಸಾವಿರಾರು ಕೋಳಿಗಳು ಇದ್ದವು. ಕೊರೊನಾ ಪರಿಣಾಮ ಕೋಳಿಗಳನ್ನು ಯಾರೂ ಕೊಳ್ಳದ ಕಾರಣ ಮಾಲೀಕ ವಿಧಿಯಿಲ್ಲದೆ ಕೋಳಿಯೊಂದಕ್ಕೆ ₹50 ನಿಗದಿಗೊಳಿಸಿದರು. ಸುತ್ತಮುತ್ತಲಿನ ಜನರು ಇದೇ ಸುಸಮಯವೆಂದು ತಿಳಿದು ಟಾಟಾ ಏಸ್, ಆಟೊ ಮತ್ತು ದ್ವಿಚಕ್ರ ವಾಹನಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕೊಂಡು ಹೋದರು.

ಮಾಸ್ಕ್ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋಳಿಗಳನ್ನು ಕೊಂಡುಕಳ್ಳುತ್ತಿದ್ದಾರೆ ಎಂದು ಕೆಲ ಜನರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಧಾವಿಸಿದ ಪೊಲೀಸರು ಕೋಳಿ ಫಾರಂ ಮಾಲೀಕ ಮತ್ತು ಅಲ್ಲಿದ್ದ ಜನರಿಗೆ ಲಾಠಿ ರುಚಿ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT