ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಮತ್ತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿ ವಾಸಿಸುತ್ತಿರುವ ಅಲೆಮಾರಿಗಳ ಕುಟುಂಬಗಳ ಬದುಕು ಶೋಚನಿಯವಾಗಿದೆ.

ಈ ಹಿಂದೆ ಇವರು ವಾಸಿಸುತಿದ್ದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣವಾಗಿ ಭಸ್ಮವಾಗಿತ್ತು. ಸದ್ಯ ಟಾರ್ಪಲ್ನಿಂದ ಟೆಂಟ್ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಟೆಂಟ್ನಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಜೋರಾಗಿ ಮಳೆ ಬಂದರೆ ನೀರು ಮನೆಯ ಒಳಗೆ ನುಗ್ಗುತ್ತದೆ. ರಾತ್ರಿಯಲ್ಲಿ ಕೂರಲು, ಮಲಗಲು ಆಗದೆ ಒದ್ದಾಡುವಂತಾಗಿದೆ. ಟೆಂಟ್ ಪಕ್ಕದಲ್ಲೇ ಒಣಗಿದ ಮರಗಳಿದ್ದು, ಮರದ ಕೊಂಬೆಗಳು ಯಾವಾಗ ಬೇಕಾದರೂ ಬೀಳಬಹುದು ಎಂಬ ಜೀವಭಯದಿಂದ ಇದ್ದೇವೆ.

‘ಮಕ್ಕಳು, ವೃದ್ಧರು, ಬಾಣಂತಿಯರು ಕುಟುಂಬದಲ್ಲಿದ್ದಾರೆ. ಗುಡಿಸಲಿಗೆ ಬೆಂಕಿ ಬಿದ್ದಾಗ ದಾಖಲೆಗಳು ಸುಟ್ಟು ಹೋಗಿವೆ. ದಿನವಿಡಿ ಕೂಲಿ ಮಾಡಿ ಮನೆಗೆ ಬರುತ್ತೇವೆ ರಾತ್ರಿಯಾದರೆ ಮಳೆಯಲ್ಲಿ ನೆನೆಯುತ್ತೇವೆ. ಅಡುಗೆ ಮಾಡಲು ಅಲ್ಲಲ್ಲಿ ಬಿದ್ದಿರುವ ಸೌದೆ ತುಂಡುಗಳನ್ನು ತಂದು ಬಳಸುತ್ತೇವೆ. ಬೆಳಕಿನ ವ್ಯವಸ್ಥೆ ಇಲ್ಲ. ಸರ್ಕಾರ ಯಾವುದೇ ಮೂಲ ಸೌಲಭ್ಯ ನೀಡುತ್ತಿಲ್ಲ’ ಎಂದು ನಿವಾಸಿ ರಾಮಜ್ಜ ದೂರಿದರು.

‘ಅಲೆಮಾರಿ ಕುಟುಂಬಗಳು ಪ್ರಾಮಾಣಿವಾಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಗುಡಿಸಲು ಸುಟ್ಟು ಹೋದವು, ನಂತರ ಯಾವುದೇ ಮೂಲ ಸೌಲಭ್ಯವನ್ನು ಸರ್ಕಾರವಾಗಲಿ, ತಾಲ್ಲೂಕು ಆಡಳಿತವಾಗಲಿ ನೀಡದೆ ಕೀಳಾಗಿ ನಡೆಸಿಕೊಳ್ಳುತ್ತಿದೆ. ಒಣಗಿರುವ ಮರಗಳು ಯಾವ ಸಮಯದಲ್ಲಿ ಬೇಕಾದರೂ ಟೆಂಟ್ ಮೇಲೆ ಬೀಳಬಹುದು ಎಂದು ಜೀವ ಭಯದಲ್ಲಿದ್ದಾರೆ. ಸಂಬಂಧಪಟ್ಟ ಇಲಾಖೆ ಇವರಿಗೆ ಸ್ಪಂದಿಸುತ್ತಿಲ್ಲ’ ಎಂದು ಗಾಂಧಿನಗರ ನಿವಾಸಿ ಅನಂತ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.