ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ಬರದ ಬೇಗೆಯ ನಡುವೆ, ಸೋಮವಾರ ಹಲವೆಡೆ ಉತ್ತಮ ಮಳೆಯಾಗಿದೆ.

ತಾಲ್ಲೂಕಿನ ಕೃಷಿ ಚಟುವಟಿಕೆಗಳಿಗೆ ಆರಂಭಿಕ ಆಧಾರವಾಗಬೇಕಿದ್ದ ‘ಅಶ್ವಿನಿ’ ಹಾಗೂ ‘ಭರಣಿ’ ಮಳೆಗಳು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಕೃಷಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಬಿತ್ತನೆಗೆ ಮಣ್ಣಿನಲ್ಲಿ ತೇವಾಂಶವಿಲ್ಲದೆ ಹಾಗೂ ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿದ್ದುದರಿಂದ ರೈತರು ಕೃತಿಕಾ ಮಳೆಯ ನಿರೀಕ್ಷೆಯಲ್ಲಿದ್ದರು.

ಸೋಮವಾರ ಸಂಜೆ ಸುರಿದ ಈ ಮಳೆಯು ಒಣಗಿ ಬಿರುಕು ಬಿಟ್ಟಿದ್ದ ಭೂಮಿಯನ್ನು ತಣಿಸಿದೆ. ಮಳೆ ಸಿಂಚನದಿಂದಾಗಿ ಸದ್ಯಕ್ಕೆ ಕೃಷಿ ಭೂಮಿ ಹದಗೊಳ್ಳುತ್ತಿದ್ದು, ರೈತರ ಮುಖದಲ್ಲಿ ಹರ್ಷ ಮೂಡಿದೆ. ಈ ವಾರವೂ ಇದೇ ರೀತಿ ಉತ್ತಮ ಮಳೆ ಮುಂದುವರಿದರೆ, ಪಾತಾಳಕ್ಕೆ ಕುಸಿದಿರುವ ತಾಲ್ಲೂಕಿನ ಅಂತರ್ಜಲ ಸಲ್ಪಮಟ್ಟಿಗೆ ಸುಧಾರಿಸಬಹುದು. ಬತ್ತಿ ಹೋಗಿರುವ ಜಲಮೂಲಗಳಿಗೆ ಮರುಪೂರಣ ಸಿಗಬಹುದು ಎಂದು ನಂಬಿಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-17-1960610391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.