ಹುಳಿಯಾರು: ಬಯಲುಸೀಮೆಯ ಸೆರಗು ಎಂದೇ ಪ್ರಸಿದ್ಧಿ ಪಡೆದ ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಈಗಾಗಲೇ ಮುಂಗಾರು ಚುರುಕುಗೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅಧಿಕ ಸಂಖ್ಯೆ ರೈತರು ಅಡಿಕೆ ನೆಡಲು ಮುಂದಾಗಿದ್ದು, ಸಸಿಗಳ ಬೇಡಿಕೆ ಮತ್ತು ದರ ಎರಡೂ ಹೆಚ್ಚಳವಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 63 ಸಾವಿರ ಹೆಕ್ಟೇರ್ ಕೃಷಿ ಭೂಮಿ ಪೈಕಿ ಸುಮಾರು 29 ಸಾವಿರ ಹೆಕ್ಟೇರ್ನಲ್ಲಿ ತೆಂಗು ಬೆಳೆ ಇದೆ. ಸುಮಾರು 11 ಸಾವಿರ ಹೆಕ್ಟೇರ್ನಲ್ಲಿ ಅಡಿಕೆ ಬೆಳೆಯಲಾಗಿದೆ. ಕೃಷಿ ಭೂಮಿಯನ್ನು ಅಡಿಕೆ ತೋಟ ಮಾಡಲು ಮುಂದಾಗುತ್ತಿರುವ ಕಾರಣ, ಆಹಾರೋತ್ಪನ್ನ ಕ್ಷೇತ್ರ ಕಡಿಮೆಯಾಗುತ್ತಿದೆ ಎಂಬುದನ್ನು ಕೃಷಿ ಇಲಾಖೆ ಅಂಕಿ ಅಂಶಗಳು ದೃಢಪಡಿಸಿವೆ.

ಕೆಲವು ಕಡೆ ತೆಂಗು, ಅಡಿಕೆ, ಇನ್ನೂ ಕೆಲವೆಡೆ ಅಡಿಕೆ ಜೊತೆಗೆ ಆಹಾರೋತ್ಪನ್ನ ಬೆಳೆ ಬೆಳೆಯಲಾಗುತ್ತಿದೆ. 10 ವರ್ಷಗಳ ಹಿಂದೆ ಕೇವಲ 2 ಸಾವಿರಕ್ಕೂ ಕಡಿಮೆ ಹೆಕ್ಟೇರ್ನಲ್ಲಿ ಬೆಳೆಯಲಾಗುತ್ತಿದ್ದ ಅಡಿಕೆಯನ್ನು ಇತ್ತೀಚಿನ ವರ್ಷಗಳಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಪ್ರತಿ ವರ್ಷ ಮುಂಗಾರು ಆರಂಭವಾಗುತ್ತಿದ್ದಂತೆ ಜೂನ್, ಜುಲೈನಲ್ಲಿ ಅಡಿಕೆ ಸಸಿ ನೆಡುವ ಹಂಗಾಮು ಪ್ರಾರಂಭವಾಗುತ್ತದೆ. ಕಳೆದ ವರ್ಷ ಕಂಡು ಬಂದ ಬರ ಹಾಗೂ ಪ್ರಸಕ್ತ ಮುಂಗಾರಿನ ಮಳೆ ಕೊರತೆ ನಡುವೆಯೂ ಅಡಿಕೆ ನೆಡುವ ಉತ್ಸುಕದಲ್ಲಿದ್ದಾರೆ ರೈತರರು. ಅಡಿಕೆ ನೆಡಲು ಸಸಿಗಳ ಖರೀದಿಗೆ ಮುಂದಾಗಿದ್ದಾರೆ. ಒಂದು ಅಡಿಕೆ ಸಸಿ ಕನಿಷ್ಠ ₹80 ರಿಂದ ₹100 ರವರೆಗೆ ಬಿಕರಿಯಾಗುತ್ತಿದ್ದು, ಅಡಿಕೆ ಸಸಿ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಮಳೆ ಕೊರತೆಯಿಂದ ಅಡಿಕೆ ಸಸಿ ಸ್ವಲ್ಪ ಕಡಿಮೆ ಮಾಡಿದ್ದೆ. ಇದ್ದ ಸಸಿಗಳು ಅವಧಿಗೆ ಮುನ್ನವೇ ಮಾರಾಟವಾಗಿದೆ ಎನ್ನುತ್ತಾರೆ ಅಡಿಕೆ ಸಸಿ ಮಾರಾಟಗಾರ ನುಲೇನೂರು ಗ್ರಾಮದ ಶಿವಾನಂದ್.

ಪ್ರತಿ ವರ್ಷ 2 ಸಾವಿರಕ್ಕೂ ಹೆಚ್ಚು ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಆಹಾರಧಾನ್ಯ ಬೆಳೆಯುವ ಪ್ರದೇಶವೇ ಇಲ್ಲದಂತಾಗಬಹುದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ಕುಮಾರ್ ಅತಂಕ ವ್ಯಕ್ತಪಡಿಸುತ್ತಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಅಡಿಕೆ ಪ್ರದೇಶವಿದ್ದು, ಉಳಿದ ಹೋಬಳಿಗಳಲ್ಲೂ ಅಡಿಕೆ ಬೆಳೆ ವಿಸ್ತಾರಗೊಳ್ಳುತ್ತಿದೆ
ಹಿರಿಯ ಸಹಾಯಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಅಡಿಕೆ ಪ್ರದೇಶವಿದ್ದು, ಉಳಿದ ಹೋಬಳಿಗಳಲ್ಲಿಯೂ ಅಡಿಕೆ ಬೆಳೆ ವಿಸ್ತಾರಗೊಳ್ಳುತ್ತಿದೆ
ರಾಜಪ್ಪ, ಹಿರಿಯ ಸಹಾಯಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.