ಚಿಕ್ಕನಾಯಕನಹಳ್ಳಿ: ಭೂಮಾಪಕರು ಕೈಗೊಂಡಿರುವ ಮುಷ್ಕರವು ಇಡೀ ಆಡಳಿತ ಯಂತ್ರವನ್ನು ಸ್ತಬ್ಧಗೊಳಿಸಿದೆ. ಈ ಮುಷ್ಕರದ ಪರಿಣಾಮವಾಗಿ ಕೇವಲ ಕಚೇರಿಯ ಕಡತಗಳು ಮಾತ್ರವಲ್ಲದೆ, ರೈತರ ಬದುಕು ಕೂಡ ಅತಂತ್ರ ಸ್ಥಿತಿಗೆ ತಲುಪಿದೆ.

ತಮ್ಮ ಸೇವಾಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಭೂಮಾಪಕರು ನಡೆಸುತ್ತಿರುವ ಪ್ರತಿಭಟನೆ ತಾಲ್ಲೂಕಿನ ಭೂಮಾಪನ ಇಲಾಖೆಯ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಹಳಿತಪ್ಪಿಸಿದೆ.

ಜಮೀನಿನ ಹದ್ದುಬಸ್ತು, ದರ್ಖಾಸ್ತು, ಪೋಡಿ, 11 ಇ ಸ್ಕೆಚ್ ಹಾಗೂ ತತ್ಕಾಲ್ ಪೋಡಿಯಂತಹ ಅತ್ಯಗತ್ಯ ಪ್ರಕ್ರಿಯೆ ಸ್ಥಗಿತಗೊಂಡಿವೆ. ಇದರಿಂದಾಗಿ ಜಮೀನು ಖರೀದಿ, ಹಕ್ಕು ಬದಲಾವಣೆ ಹಾಗೂ ವಿಭಾಗ ಪತ್ರದಂತಹ ಕಾನೂನಾತ್ಮಕ ವ್ಯವಹಾರ ಅಸ್ತವ್ಯಸ್ತಗೊಂಡಿವೆ.

ಪ್ರಸ್ತುತ 651 ಹದ್ದುಬಸ್ತು, 738 ದರ್ಖಾಸ್ತು ಪೋಡಿ, 462 ತತ್ಕಾಲ್ ಪೋಡಿ, 11ಇ 384 ಹಾಗೂ 124 ಇತರೆ ಸೇರಿದಂತೆ ಒಟ್ಟು 2,359 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.

ತಾಲ್ಲೂಕಿನಲ್ಲಿ 20 ಖಾಸಗಿ ಹಾಗೂ 7 ಸರ್ಕಾರಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಸೇವಾ ಭದ್ರತೆಗಾಗಿ ಖಾಸಗಿ ಭೂಮಾಪಕರು ಮುಷ್ಕರಕ್ಕೆ ಇಳಿದಿರುವುದರಿಂದ ಕೆಲಸದ ಒತ್ತಡ ಸರ್ಕಾರಿ ಭೂಮಾಪಕರ ಮೇಲೆ ಬಿದ್ದಿದೆ. ಲಭ್ಯವಿರುವ 7 ಸರ್ಕಾರಿ ಭೂಮಾಪಕರಲ್ಲಿ ಆಕಾರ್ ಬಂದ್, ತಾಲ್ಲೂಕು ಸರ್ವೆ ಹಾಗೂ ಸುಮಿತ್ವಾ ಯೋಜನೆಗಳಿಗೆ ಐವರನ್ನು ನಿಯೋಜಿಸಲಾಗಿದೆ. ಉಳಿದ ಇಬ್ಬರು ಭೂಮಾಪಕರು 2,359 ಅರ್ಜಿಗಳನ್ನು ವಿಲೇವಾರಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸರ್ಕಾರದ ನಿಯಮದಂತೆ ಒಬ್ಬ ಭೂಮಾಪಕರು ತಿಂಗಳಿಗೆ 23 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ಸಾಧ್ಯವಿದೆ. ಈಗಿನ ಪರಿಸ್ಥಿತಿಯಲ್ಲಿ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ವರ್ಷಗಳೇ ಬೇಕಾಗಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಈ ಸಮಸ್ಯೆಯು ಕೇವಲ ಕಚೇರಿ ಕೆಲಸಕ್ಕೆ ಸೀಮಿತವಾಗಿಲ್ಲ. ನೇರವಾಗಿ ರೈತರ ಆರ್ಥಿಕ ಮೂಲಕ್ಕೆ ಪೆಟ್ಟು ನೀಡಿದೆ. ಪ್ರಸ್ತುತ ಬಿಸಿಲಿನ ತಾಪಕ್ಕೆ ಅಡಿಕೆ ಮತ್ತು ತೆಂಗಿನ ತೋಟಗಳು ಒಣಗುತ್ತಿವೆ. ಅಂತರ್ಜಲ ಕುಸಿತದಿಂದಾಗಿ ಹೊಸ ಬೋರ್ವೆಲ್ ಕೊರೆಸಬೇಕಾದ ಅನಿವಾರ್ಯತೆ ರೈತರಿಗಿದೆ. ಆದರೆ, ಬೋರ್ವೆಲ್ ಕೊರೆಸಲು ಹಣದ ಅಗತ್ಯವಿದ್ದು, ಬ್ಯಾಂಕ್ ಸಾಲ ಪಡೆಯಬೇಕಾದರೆ ಜಮೀನಿನ ಸ್ಕೆಚ್ ಮತ್ತು ಪೋಡಿ ದಾಖಲೆ ಅಗತ್ಯ. ದಾಖಲೆಗಳಿಲ್ಲದೆ ಬ್ಯಾಂಕ್ ಸಾಲ ದೊರೆಯದೆ, ಅತ್ತ ತೋಟಕ್ಕೆ ನೀರುಣಿಸಲೂ ಸಾಧ್ಯವಾಗದೆ ರೈತರು ದಿಕ್ಕೆಟ್ಟಿದ್ದಾರೆ.

ಯಾವುದೇ ಸೇವಾ ಭದ್ರತೆ ಇಲ್ಲ

ಕಳೆದ 2002ರಿಂದಲೂ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರಸ್ತುತ ನಮಗೆ ಪ್ರತಿ ಕಡತದ ವಿಲೇವಾರಿಗೆ ಕೇವಲ ₹1,200 ಕಮಿಷನ್ ಆಧಾರಿತ ಸಂಭಾವನೆ ನೀಡಲಾಗುತ್ತಿದೆ. ದುರದೃಷ್ಟವಶಾತ್, ಈ ಅತ್ಯಲ್ಪ ಮೊತ್ತವೂ ನಮಗೆ ಸಕಾಲದಲ್ಲಿ ತಲುಪುತ್ತಿಲ್ಲ. ನಾವು ಸರ್ಕಾರದ ಅಂಗವಾಗಿಯೇ ಕೆಲಸ ಮಾಡುತ್ತಿದ್ದರೂ ನಮಗೆ ಯಾವುದೇ ಸೇವಾ ಭದ್ರತೆ ಇಲ್ಲದಂತಾಗಿದೆ.

ಅಣ್ಣಪ್ಪ ಸ್ವಾಮಿ, ತಾಲ್ಲೂಕು ಪರವಾನಿಗೆ ಭೂಮಾಪಕರ ಸಂಘದ ಅಧ್ಯಕ್ಷ

ಕಚೇರಿಗೆ ಅಲೆಯುತ್ತಿದ್ದೇವೆ

ತೋಟದಲ್ಲಿ ಅಡಿಕೆ ಮರ ಕಣ್ಣೆದುರೇ ಒಣಗುತ್ತಿವೆ. ಇದ್ದ ಬೋರ್ವೆಲ್ ಬತ್ತಿ ಹೋಗಿದೆ. ಹೊಸದಾಗಿ ಬೋರ್ವೆಲ್ ಕೊರೆಸಲು ಜಮೀನಿನ ಮೇಲೆ ಬ್ಯಾಂಕ್ ಸಾಲ ಪಡೆಯೋಣವೆಂದರೆ ಭೂಮಾಪನ ಇಲಾಖೆಯಿಂದ ಸ್ಕೆಚ್ ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿಂದ ಅರ್ಜಿ ಹಾಕಿ ಕಚೇರಿಗೆ ಅಲೆಯುತ್ತಿದ್ದೇವೆ. ಅಧಿಕಾರಿಗಳನ್ನು ಕೇಳಿದರೆ ಸರ್ವೆಯರ್ಗಳು ಮುಷ್ಕರದಲ್ಲಿದ್ದಾರೆ ಎನ್ನುತ್ತಾರೆ. ವಿಧಿ ಇಲ್ಲದೇ ಕೈ ಸಾಲ ಮಾಡಿ ಬೋರ್ವೆಲ್ ಕೊರೆಯಿಸಿದ್ದೇನೆ.

–ಸಿದ್ದಪ್ಪ, ರೈತ

ಗಾಯದ ಮೇಲೆ ಬರೆ

ಮಗಳ ಮದುವೆಗಾಗಿ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ನಿರ್ಧರಿಸಿ ಮುಂಗಡ ಹಣ ಪಡೆದಿದ್ದೆ. ಆದರೆ ಹದ್ದುಬಸ್ತು ಮತ್ತು ಪೋಡಿ ಪ್ರಕ್ರಿಯೆ ನಡೆಯದ ಕಾರಣ ಕ್ರಯಪತ್ರ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಖರೀದಿದಾರರು ಹಣ ವಾಪಸ್ ಕೇಳುತ್ತಿದ್ದಾರೆ. ಭೂಮಾಪಕರ ಮುಷ್ಕರ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಡಳಿತ ಯಂತ್ರ ಸಂಪೂರ್ಣ ನಿಶ್ಚಲವಾಗಿದೆ. ಸಾಮಾನ್ಯ ರೈತರ ಕೂಗು ಯಾರಿಗೆ ಕೇಳಿಸುತ್ತಿಲ್ಲ.

–ರಂಗನಾಥ್, ಹುಳಿಯಾರು

ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾಯಿತು

ಅಣ್ಣ-ತಮ್ಮಂದಿರ ನಡುವೆ ಜಮೀನು ವಿಭಾಗ ಮಾಡಿಕೊಂಡು ಪ್ರತ್ಯೇಕವಾಗಿ ಸಾಲ ಪಡೆಯಲು 11ಇ ಸ್ಕೆಚ್ಗೆ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾಯಿತು. ಈಗ ಕೇವಲ ಇಬ್ಬರೇ ಸರ್ಕಾರಿ ಭೂಮಾಪಕರು ಇದ್ದಾರೆ ಎಂದರೆ ಸಾವಿರಾರು ಅರ್ಜಿಗಳು ವಿಲೇವಾರಿಯಾಗುವುದು ಯಾವಾಗ? ತಿಂಗಳಿಗೆ ಕೇವಲ 23 ಅರ್ಜಿ ಮುಗಿಸಿದರೆ, ನಮ್ಮ ಸರದಿ ಬರಲು ವರ್ಷಗಳೇ ಬೇಕಾಗಬಹುದು.

–ಕೆಂಪರಾಜು, ಹಂದನಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.