ಚಿಕ್ಕನಾಯಕನಹಳ್ಳಿ: ನಿರ್ಲಕ್ಷ್ಯಕ್ಕೆ ಒಳಗಾದ ತಾಲ್ಲೂಕು ಕ್ರೀಡಾಂಗಣ
ಸೌಲಭ್ಯಗಳಿಲ್ಲದೆ ಕ್ರೀಡಾಪಟುಗಳಿಗೆತೀವ್ರ ತೊಂದರೆ– ಕ್ರೀಡಾ ಪ್ರೇಮಿಗಳ ಆಕ್ರೋಶ
ಮಂಜುನಾಥ್
Published : 25 ಮೇ 2026, 0:03 IST
Last Updated : 25 ಮೇ 2026, 6:01 IST
ADVERTISEMENT
ಫಾಲೋ ಮಾಡಿ
Comments
ಬೇರೆಡೆ ತೆರಳಬೇಕಾದ ಅನಿವಾರ್ಯ ಟ್ರ್ಯಾಕ್ ಮೇಲೆ ಓಡುವಾಗ ಗಮನವೆಲ್ಲ ಗುರಿಯ ಮೇಲಿರಬೇಕೇ ಹೊರತು, ಕಾಲಡಿ ಇರುವ ಗುಂಡಿಗಳ ಮೇಲಲ್ಲ! ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ನಾವು ಸೆಕೆಂಡಿನ ನೂರನೇ ಒಂದು ಭಾಗದ ಪ್ರಗತಿಗಾಗಿ ದಿನವಿಡೀ ಶ್ರಮಿಸುತ್ತೇವೆ. ಆದರೆ ಇಲ್ಲಿನ ಉಬ್ಬು-ತಗ್ಗುಗಳನೆಲದಲ್ಲಿ ಓಡುವಾಗ ಟೈಮಿಂಗ್ಸ್ ಸುಧಾರಿಸುವುದು ಹಾಗಿರಲಿ, ಎಲ್ಲಿ ಆಯತಪ್ಪಿ ಬಿದ್ದು ಮೂಳೆ ಮುರಿದುಕೊಳ್ಳುತ್ತೇವೊ ಎಂಬ ಭಯ ಕಾಡುತ್ತದೆ. ಮುಂದೆ ದೇಶಕ್ಕಾಗಿ ಪದಕ ಗೆಲ್ಲಬೇಕಾದರೆ ನಾವು ತರಬೇತಿಗಾಗಿ ಬೇರೆ ಸ್ಥಳಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ಶಶಾಂಕ್, ರಾಷ್ಟ್ರೀಯ ಅಥೀಟ್
'ಸಿಂಥೆಟಿಕ್ ಟ್ರ್ಯಾಕ್' ತುರ್ತು ನಮ್ಮತಾಲ್ಲೂಕಿನಿಂದ ಆರು ಜನ ರಾಷ್ಟ್ರೀಯ ಮಟ್ಟಕ್ಕೆ ಹಾಗೂ ಎಂಟು ಜನ ರಾಜ್ಯ-ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದರೆ ನಮಗೆ ಅಭ್ಯಾಸ ಮಾಡಲುಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್' ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ. ಮೈದಾನದ ತುಂಬಾ ಉಬ್ಬು-ತಗ್ಗುಗಳಿದ್ದು, ವೇಗವಾಗಿ ಓಡುವಾಗ ಆಯತಪ್ಪಿ ಬಿದ್ದು ಗಾಯಗೊಂಡ ನಿದರ್ಶನಗಳಿವೆ. ಉನ್ನತ ಸ್ಪರ್ಧೆಗಳಿಗೆ ಸಿದ್ಧರಾಗಲು ನಾವು ಬೇರೆ ಊರುಗಳಿಗೆ ವಲಸೆ ಹೋಗುವಂತಾಗಿದೆ.
ದೀಪಕ್, ರಾಷ್ಟ್ರೀಯ ಅಥ್ಲೆಟ್
ಪ್ರತ್ಯೇಕ ನಡಿಗೆ ಪಥ ಬೇಕು ನಮಗೆ ಆಡಲು ಮೈದಾನ ಬೇಕು. ಹಿರಿಯರಿಗೆ ವಾಕಿಂಗ್‌ಗೆ ಪ್ರತ್ಯೇಕ ದಾರಿ ಬೇಕು. ಕ್ರೀಡಾಂಗಣದಲ್ಲಿ ಸುಸಜ್ಜಿತ 'ವಾಕಿಂಗ್ ಪಾತ್' ಇಲ್ಲದ ಕಾರಣ ನಾವು ಆಡುವ ಜಾಗದಲ್ಲೇ ವಾಕಿಂಗ್ ಮಾಡುವ ಸ್ಥಿತಿ ಇದೆ.ನಾವು ಜೋರಾಗಿ ಒದ್ದಫುಟ್‌ಬಾಲ್ ಅಥವಾ ಕ್ರಿಕೆಟ್ ಬಾಲ್ ಯಾವಾಗ ಯಾರ ತಲೆಗೆ ಬಡಿಯುತ್ತದೊ ಎಂಬ ಆತಂಕದಲ್ಲೇ ಆಟವಾಡಬೇಕಾಗಿದೆ. ಕ್ರೀಡಾಂಗಣಕ್ಕೆ ಬರುವ ಪ್ರತಿಯೊಬ್ಬರಿಗೂ ಸುರಕ್ಷತೆ ಇಲ್ಲದಂತಾಗಿದೆ. ಕ್ರೀಡಾ ಇಲಾಖೆ ತಕ್ಷಣವೇ ಮೈದಾನವನ್ನು ಸಮತಟ್ಟುಗೊಳಿಸಿ. ಸಾರ್ವಜನಿಕರಿಗೆ ಪ್ರತ್ಯೇಕ ನಡಿಗೆ ಪಥ ನಿರ್ಮಿಸಿ-ಕೊಡಬೇಕು.
ಪಯಾಜ್, ಸ್ಥಳೀಯ ಆಟಗಾರ
ಸ್ವಚ್ಛತೆ ಮಾಯ ಕ್ರೀಡಾಂಗಣದಲ್ಲಿ ಕನಿಷ್ಠ ಬೆಳಕಿನ ವ್ಯವಸ್ಥೆಯೂ ಇಲ್ಲದಿರುವುದರಿಂದ ರಾತ್ರಿ ಅಭ್ಯಾಸ ಮಾಡುವ ಕ್ರೀಡಾಪಟುಗಳಿಗಾಗಿ ಸ್ಥಳೀಯರೇ ಒಗ್ಗೂಡಿ ತಾತ್ಕಾಲಿಕ ಬೆಳಕಿನ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ವರ್ಷದ ಬಹುತೇಕ ದಿನಗಳಲ್ಲಿ ಕನಿಷ್ಠ ಮಟ್ಟದ ಸ್ವಚ್ಛತೆಯೂ ಇಲ್ಲದೆ ಕಸದ ತೊಟ್ಟಿಯಂತಾಗುತ್ತದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಅಧುನಿಕ ಜಿಮ್ ಹಾಗೂ ಕ್ರೀಡಾಂಗಣದ ಶಾಶ್ವತ ಸುಧಾರಣೆಗೆ ಮುಂದಾಗಬೇಕು.