ಚಿಕ್ಕನಾಯಕನಹಳ್ಳಿ: ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಿಗೆ ಮಳೆ ಕೊನೆಗೂ ತಂಪೆರೆದಿದೆ.

ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ಸುರಿದ ಮಳೆ ಒಣಗಿದ್ದ ಭೂಮಿಗೆ ಜೀವಕಳೆ ನೀಡಿದೆ.

ತಾಲ್ಲೂಕಿನ ಶೆಟ್ಟೀಕೆರೆ, ಕುಪ್ಪೂರು, ಸಾಸಲು, ಹುಳಿಯಾರು ಮತ್ತು ಸಿಂಗದಹಳ್ಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

ಅಕಾಲಿಕ ಮಳೆಯು ತಾಲ್ಲೂಕಿನ ಪ್ರಮುಖ ಬೆಳೆಗಳಾದ ತೆಂಗು ಮತ್ತು ಅಡಿಕೆ ತೋಟಗಳಿಗೆ ಸಂಜೀವಿನಿಯಂತೆ ಒದಗಿಬಂದಿದೆ. ಕೆಲವು ವಾರಗಳಿಂದ ಅಂತರ್ಜಲ ಕುಸಿದು ತೋಟಗಳು ಒಣಗುವ ಭೀತಿಯಲ್ಲಿದ್ದ ರೈತರಿಗೆ ಮಳೆ ಹೊಸ ಭರವಸೆ ನೀಡಿದೆ.

ಪಟ್ಟಣ ಪ್ರದೇಶದಲ್ಲಿ ದೂಳು ಮತ್ತು ಮಿತಿಮೀರಿದ ಉಷ್ಣಾಂಶದಿಂದ ಜನರು ಪರದಾಡುತ್ತಿದ್ದರು. ಈ ಮಳೆಯಿಂದಾಗಿ ವಾತಾವರಣದಲ್ಲಿನ ಶಾಖ ಕಡಿಮೆಯಾಗಿದ್ದು, ಹವಾಮಾನ ಆಹ್ಲಾದಕರವಾಗಿದೆ. ರಸ್ತೆ ಬದಿಯ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರಿನ ಆಸರೆ ದೊರೆತಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.